ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ ಸುರೇಶ ನೆಗಳಗುಳಿ ಅವರಿಗೆ ಕೊರೋನಾ ವಾರಿಯರ್ ಪುರಸ್ಕಾರ

ಡಾ ಸುರೇಶ ನೆಗಳಗುಳಿ ಅವರಿಗೆ ಕೊರೋನಾ ವಾರಿಯರ್ ಪುರಸ್ಕಾರ


ಮಂಗಳೂರು: ಕೋವಿಡ್ ಹಾವಳಿಯ ಈ ಎರಡು ವರ್ಷಗಳ ಪರ್ಯಂತ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸೋಂಕಿತರ ಆರೋಗ್ಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಮಿಶ್ರ ಪದ್ಧತಿ ತಜ್ಞ ಡಾ ಸುರೇಶ ನೆಗಳಗುಳಿ ಇವರನ್ನು ಕೋರೋನಾ ವಾರಿಯರ್ ವಿಶೇಷ ಸನ್ಮಾನ ಸಹಿತ ಗೌರವಿಸಲಾಗುವುದೆಂದು ಕಥಾ ಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಪಿ.ವಿ ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸದ್ರಿ ಕಾರ್ಯಕ್ರಮವು ಕಥಾಬಿಂದು ಸಾಂಸ್ಕೃತಿಕ ವೇದಿಕೆ ಮಂಗಳೂರು ಮತ್ತು ಸಮೃದ್ಧಿ  ಪ್ರಕಾಶನ ಕೊಮ್ಮಗಟ್ಡ ಸಹಯೋಗದಲ್ಲಿ ಇದೇ ಬರುವ ದಿನಾಂಕ 20 ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯಲಿರುವುದು.


ರಾಜ್ಯಾಧ್ಯಕ್ಷ ಮಹೇಶ್ ಜೋಷಿ, ಸಂಸದ ಅಶ್ವತ್ಥ ನಾರಾಯಣ ಸಹಿತ ಹಲವು ಗಣ್ಯರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು ಅದೇ ವೇಳೆ ಇತರ ಹಲವಾರು ಸಾಧಕರನ್ನೂ ಗೌರವಿಸಲಾಗುವುದು ಮತ್ತು ರೇಮಂಡ್ ಡಿ ಕುನ್ಹ ತಾಕೊಡೆ ಇವರ ಆಭರಣಗಳು  ಮತ್ತಿತರ ಕವಿಗಳ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ- ಸಹ ಜರುಗಲಿರುವುದಾಗಿ ಅವರು ತಿಳಿಸಿದ್ದಾರೆ.



0 تعليقات

إرسال تعليق

Post a Comment (0)

أحدث أقدم