ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಹಿಳೆಯ ಹೊಟ್ಟೆಯಿಂದ 47 ಕೆಜಿ ತೂಕದ ಗೆಡ್ಡೆ ಯನ್ನು ಹೊರ ತೆಗೆದ ವೈದ್ಯರು

ಮಹಿಳೆಯ ಹೊಟ್ಟೆಯಿಂದ 47 ಕೆಜಿ ತೂಕದ ಗೆಡ್ಡೆ ಯನ್ನು ಹೊರ ತೆಗೆದ ವೈದ್ಯರು



ಗಾಂಧಿನಗರ (ಗುಜರಾತ್‌): ಇಲ್ಲಿನ ಮಹಿಳೆಯ ಹೊಟ್ಟೆಯಿಂದ 47 ಕೆಜಿ ತೂಕದ ಟ್ಯೂಮರ್‌ನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.

56 ವರ್ಷದ ಮಹಿಳೆಯ ಹೊಟ್ಟೆಯಿಂದ 47 ಕೆಜಿ ಗಾತ್ರದ ಟ್ಯೂಮರ್ ಹೊರತೆಗೆದ ನಂತರ ಇದೀಗ ಆಕೆಯ ತೂಕ ಕೇವಲ 49 ಕೆಜಿಯಷ್ಟಿದೆ.

18 ವರ್ಷದಿಂದ ಟ್ಯೂಮರ್‌ನಿಂದ ಬಳಲುತ್ತಿದ್ದ ಮಹಿಳೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಬದುಕುಳಿಸಿದ್ದಾರೆ. ಭಾರತದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಅತಿದೊಡ್ಡ ಗಡ್ಡೆ ಇದಾಗಿದೆ ಎಂದು ಹೇಳಲಾಗಿದೆ. ರೋಗಿ ವರ್ಷಗಳಿಂದ ಬೆಡ್ ರಿಡನ್ ಆಗಿದ್ದರು.

ನಿಲ್ಲುವುದು ಕೂಡ ಅವರಿಗೆ ಅಸಾಧ್ಯವಾಗಿತ್ತು. ಇದ್ದಕ್ಕಿದ್ದಂತೆಯೇ ಮಹಿಳೆ ತೂಕ ಏರುತ್ತಾ ಬಂದಿತ್ತು. ನಂತರ ಇದು ಒಂದು ದೊಡ್ಡ ಗಡ್ಡೆಯಾಯ್ತು.

 ಎಂಟು ವೈದ್ಯರು ಸೇರಿ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم