ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಡವರ ಸಹಾಯಾರ್ಥ ಕ್ರಿಕೆಟ್ ಪಂದ್ಯಾಟ

ಬಡವರ ಸಹಾಯಾರ್ಥ ಕ್ರಿಕೆಟ್ ಪಂದ್ಯಾಟ


ಕುಪ್ಪೆಪದವು: ಟಿ.ಎಫ್.ಸಿ ತೌಡಂಗೆ ಕೊಳವೂರು ಇದರ ಆಶ್ರಯದಲ್ಲಿ ಬಡವರ ಸಹಾಯಾರ್ಥ ಸತತ ಎರಡನೇ ವರ್ಷದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ಫೆಬ್ರವರಿ 13 ಮತ್ತು 14 ರಂದು ತೌಡಂಗೆ  ಮೈದಾನದಲ್ಲಿ ನಡೆಸಲಾಯಿತು.


ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಉದ್ಯಮಿ ಪ್ರೇಮನಾಥ್ ವಹಿಸಿದ್ದರು. ಗೋಳಿಕಂಬಳದ ಅಧ್ಯಕ್ಷ ರಶ್ಮಿತ್ ಶೆಟ್ಟಿ ಒಕ್ಕಾಡಿ ಹಾಗೂ ಪಂಚಾಯತ್ ಅಧ್ಯಕ್ಷ ಸತೀಶ್ ಬಳ್ಳಾಜೆ, ಸದಸ್ಯ ಪ್ರವೀಣ್ ಆಳ್ವ ಹಾಗೂ ಕುಪ್ಪೆಪದವು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಇರ್ಫಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭಕೋರಿದರು.


ಪಂದ್ಯಾಟದಲ್ಲಿ ಹತ್ತೊಂಬತ್ತು ತಂಡಗಳು ಭಾಗವಹಿಸಿದ್ದವು. ಫಾರೂಕ್ ಬ್ರದರ್ಸ್ ತಂಡ ಪ್ರಶಸ್ತಿ ಜಯಿಸಿದರೆ, ಡೈಲಿ ಗೈಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ನಿತಿನ್ ಮುತ್ತೂರು ಹಾಗೂ ರಿಯಾಝ್ ಕುಪ್ಪೆಪದವು ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم