ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ರೇಜಿಸ್ಟಾರ್ ರವಿಚಂದ್ರ ಅವರ ತಾಯಿ ನಿಧನ

ಕ್ರೇಜಿಸ್ಟಾರ್ ರವಿಚಂದ್ರ ಅವರ ತಾಯಿ ನಿಧನ

 


ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಸೋಮವಾರ ನಿಧನರಾಗಿದ್ದಾರೆ.


ಸಿನಿಮಾ ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.


ಸುಗುಣ ಆಸ್ಪತ್ರೆಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಮೃತಪಟ್ಟ ಪಟ್ಟಮಾಳ್ ಅವರ ಪಾರ್ಥಿವ ಶರೀರವನ್ನು 10.30ಕ್ಕೆ ರವಿಚಂದ್ರ ಅವರ ಮನೆಗೆ ತರಲಾಗುತ್ತದೆ. ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ.


ನಟ ರವಿಚಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳನ್ನು  ಅವರು ಅಗಲಿದ್ದಾರೆ.


ಅವರಿಗೆ ಕಳೆದ ಹತ್ತು ವರ್ಷಗಳಿಂದ ಮರೆವಿನ ಕಾಯಿಲೆಯೂ ಇತ್ತು.


0 تعليقات

إرسال تعليق

Post a Comment (0)

أحدث أقدم