ಬದಿಯಡ್ಕ: ವಿಭೂತಿ ಧಾರಣೆ ಹಿಂದೂ ಸಮಾಜದ ಎಲ್ಲ ವರ್ಗಗಳಲ್ಲಿ ಧಾರ್ಮಿಕವಾಗಿ ಶತಶತಮಾನಗಳಿಂದ ಬಳಕೆಯಲ್ಲಿದೆ. ವಿಭೂತಿ ಧಾರಣೆಯಿಂದ ದೇಹದ ಒಳಗಿನ ಮತ್ತು ಹೊರಗಿನ ಕೆಟ್ಟ ಶಕ್ತಿಗಳೆಲ್ಲ ನಿವಾರಣೆಯಾಗುತ್ತವೆ. ಈ ವಿಭೂತಿ ತಯಾರಿಗಾಗಿ ದೇಸೀ ಗೋವಿನ ಸಗಣಿಯಿಂದ ಮಾಡಿದ ಬೆರಣಿಯನ್ನು ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಂದು ಸುಡುವುದು ಅತ್ಯಂತ ಶ್ರೇಷ್ಠ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.
ಈ ನಿಟ್ಟಿನಲ್ಲಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಈ ವರ್ಷದ ಮಹಾಶಿವರಾತ್ರಿಯಂದು ಊರ ಸಮಾಜ ಬಾಂಧವರ ಸಹಕಾರದೊಂದಿಗೆ ಬೆರಣಿ ಜ್ವಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 1ರಂದು ಮಂಗಳವಾರ ಸಂಜೆ 5:30ಕ್ಕೆ ಸರಿಯಾಗಿ ಈ ಕಾರ್ಯಕ್ರಮ ಆರಂಭವಾಗಲಿದೆ. ಆಸ್ತಿಕ ಬಾಂಧವರು, ಧಾರ್ಮಿಕ ಶ್ರದ್ಧಾಳುಗಳು ಅಂದು ಬೆರಣಿಯನ್ನು ತಂದು ಬೆರಣಿ ಜ್ವಲನ ಕಾರ್ಯಕ್ರಮದಲ್ಲಿ ಅಗ್ನಿಗೆ ಅರ್ಪಿಸಬಹುದು. ಬನ್ನಿ ಬೆರಣಿ ತನ್ನಿ, ವಿಭೂತಿ ಮಾಡೋಣ, ವಿಭೂತಿ ಧರಿಸೋಣ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೈ ಶ್ರೀಧರ ಅವರು ಮನವಿ ಮಾಡಿದ್ದಾರೆ.
ಭಕ್ತರಿಗೆ ಸದವಕಾಶಗಳು:
ನಿಮ್ಮ ಮನೆಯಲ್ಲಿ ದೇಸೀ ಗೋವು ಇದ್ದರೆ ನಾಳೆಯಿಂದಲೇ ಅದರ ಸೆಗಣಿಯನ್ನು ಬೆರಣಿಯಾಗಿ ತಟ್ಟಿ ಒಣಗಿಸಿ ಇಡಿ. ಬೆರಣಿಗೆ ಇಂಥದ್ದೇ ಆಕಾರ, ಇಷ್ಟೇ ದಪ್ಪ ಇರಬೇಕು ಎಂಬುದೆಲ್ಲ ಇಲ್ಲ.
ನಿಮ್ಮ ಮನೆಯಲ್ಲಿ ದೇಸೀ ಗೋವು ಇಲ್ಲದಿದ್ದರೆ ದೇಸೀ ಗೋವಿನ ಸೆಗಣಿ ಲಭ್ಯವಿರುವಲ್ಲಿಂದ ತಂದು ಬೆರಣಿ ತಟ್ಟಿ ಸಿದ್ಧಪಡಿಸಿಕೊಳ್ಳಬಹುದು.
ಈ ಬೆರಣಿಗೆ ಅಂದಾಜು 4 ಬಿಸಿಲು ಚೆನ್ನಾಗಿ ತಾಗಬೇಕು.
ಫೆಬ್ರವರಿ 13ರಂದು ಅಂದರೆ, ನಾಳೆಯೇ- ದೇವಸ್ಥಾನದಲ್ಲಿ ಸಾಮೂಹಿಕವಾಗಿ ಬೆರಣಿ ತಟ್ಟುವ ಕಾರ್ಯಕ್ರಮವಿದೆ. ಇದರಲ್ಲಿಯೂ ಭಾಗವಹಿಸಬಹುದು.
ನಿಮ್ಮಲ್ಲಿ ತಯಾರಾದ ಬೆರಣಿಯ ಸಂಖ್ಯೆಯನ್ನು ಫೆ.25ರ ಮೊದಲು ದೇವಸ್ಥಾನಕ್ಕೆ ತಿಳಿಸಿ.
ವಿಭೂತಿಯು ದೇವರಿಗೆ ಅರ್ಚನೆಯಾಗಲಿರುವುದರಿಂದ ಅದಕ್ಕನುಗುಣವಾದ ಪರಿಶುದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ.
ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ: 94950 51207 / 96560 84205 / 94958 59552- ಈ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق