ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ ಸುರೇಶ ನೆಗಳಗುಳಿ ಅವರಿಗೆ ಕೊರೋನಾ ವಾರಿಯರ್ ಸನ್ಮಾನ

ಡಾ ಸುರೇಶ ನೆಗಳಗುಳಿ ಅವರಿಗೆ ಕೊರೋನಾ ವಾರಿಯರ್ ಸನ್ಮಾನ



ಬೆಂಗಳೂರು: ಕಥಾ ಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಸಮೃದ್ಧಿ ಫೌಂಡೇಷನ್ ಕೊಮ್ಮಘಟ್ಟ ಸಂಯುಕ್ತ ಸಹಕಾರದಲ್ಲಿ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಫೆ 20ರ ಇಳಿಹಗಲಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಸಮಾರಂಭವು ಅತ್ಯಂತ ಅದ್ದೂರಿಯಾಗಿ ನೆರವೇರಿತು.


ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಕಲಾ ಪೋಷಕ ಸಿದ್ಧಲಿಂಗಯ್ಯ ವಹಿಸಿದ್ದರು.


ಈ ಸಂದರ್ಭದಲ್ಲಿ ವಿಶೇಷವಾಗಿ ವೈದ್ಯಕೀಯ ಸೇವಾ ನಿರತರಾಗಿ ಸರಕಾರೀ ಆಪ್ತಮಿತ್ರ ಬಳಗದ ಸಕ್ರಿಯ ಸೇವಾನಿರತನಾಗಿ ಕಳೆದೆರಡು ವರ್ಷಗಳಿಂದ ಕೊರೋನಾ ಪೀಡಿತರ ಸಲಹಾ ವೈದ್ಯನಾಗಿ ಕೊರೋನಾ ವಾರಿಯರ್ ಎಂದು ಗುರುತಿಸಲ್ಪಟ್ಟ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರನ್ನು" ಕೊರೋನಾ ವಾರಿಯರ್ "ಎಂಬ ಬಿರುದು ಸಹಿತ ಹಾರ ಶಾಲು ಫಲಕಗಳಿಂದ ಸನ್ಮಾನಿಸಲಾಯಿತು.


ಇದೇ ವೇಳೆ ಅಗಲಿದ ನಟ ಪುನೀತ್ ನುಡಿನಮನ‌ ಮತ್ತು ನಟ ರಾಜೇಶ್ ಸ್ಮರಣೆ ಕಾರ್ಯಕ್ರಮ ವೂ ಜರುಗಿತು.




ಮುಂಬಯಿ ಸಮಾಜ ಸೇವಕಿ ಶ್ರೀಮತಿ ರಜನೀ ಪೈ, ಬೆಂಗಳೂರಿನ ಹದಿನೆಂಟು ಕೃತಿಗಳ ಸಾಧಕಿ ಶ್ವೇತಾ ನಿಹಾಲ್ ಜೈನ್, ಕೊಕ್ಕಡ ಶಿವಪ್ರಸಾದ್ ಸಹಿತ ಹಲವು ಕ್ಷೇತ್ರಗಳ ಸಾಧಕರನ್ನು ಗೌರವಿಸುವುದರ ಜೊತೆಗೆ ಪಿಂಗಾರ ಪತ್ರಿಕೆಯ ಮುಖ್ಯಸ್ಥ ರೇಮಂಡ್ ಡಿ ಕುನ್ಹ ಇವರ ನೀತಿಪ್ರದ ಜೀವನ ಪದ್ಧತಿಯ ಬಗೆಗಿನ ಆಭರಣಗಳು ಕೃತಿ ಬಿಡುಗಡೆ, ಜೆ.ಜಿ ನರಸಿಂಹಯ್ಯ ಇವರ ಕೃತಿ ಚಿತ್ತಾರ, ಲಕ್ಷ್ಮಣ ಮೂರ್ತಿ ಇವರ ವೈಷ್ಣೋದೇವಿ ಕುರಿತಾದ ಕೃತಿಯ ಹನ್ನೊಂದನೇ ಆವೃತ್ತಿ ಹಾಗೂ ಇನ್ನಿತರ ಕವಿಗಳ ಪುಸ್ತಕ ಬಿಡುಗಡೆ ಸಮಾರಂಭ ಸಹ ನಡೆಯಿತು.


ಹಲವಾರು ಪ್ರತಿಭಾನ್ವಿತ ರಾಷ್ಟ್ರೀಯ ಮನ್ನಣೆ ಗೈದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ, ಗಂಗಾಧರ ಗಾಂಧಿ, ಇಂದ್ರಮ್ಮ ಬಳಗದ ರಸಸಂಜೆ ಹಾಗೂ ಮೂಡುಬಿದಿರೆಯ ಮಾನಸಾ ಪ್ರವೀಣ ಭಟ್ ಇವರ ಸಂಚಾಲಕತ್ವದ  ನುರಿತ ಕವಿಗಳ ಕವಿಗೋಷ್ಠಿಯೂ ಇದೇ ವೇಳೆ ಸಂಪನ್ನವಾಯಿತು.


ಕಥಾ ಬಿಂದು ಸಂಸ್ಥೆಯ ಮುಖ್ಯಸ್ಥ ಪಿವಿ ಪ್ರದೀಪ್ ಕುಮಾರ್ ಹಾಗೂ ಸಂವೃದ್ಧಿ ಬಳಗದ ರುದ್ರಾರಾಧ್ಯ ಅವರ ಸಾರಥ್ಯದಲ್ಲಿ ನಡೆದ ಈ ಸಮಾರಭದಲ್ಲಿ ಡಾ ಶೇಖರ ಅಜೆಕಾರು, ನಿರೂಪಣೆಯಲ್ಲಿ ಸಹಕರಿಸಿದ್ದರು.


free website counter


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم