ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು ನಗರಸಭೆಯಿಂದ ಬೀದಿ ಗಾಡಿಗಳ ವಶ; ವ್ಯಾಪಾರಿಗಳ ಪ್ರತಿಭಟನೆ

ಚಿಕ್ಕಮಗಳೂರು ನಗರಸಭೆಯಿಂದ ಬೀದಿ ಗಾಡಿಗಳ ವಶ; ವ್ಯಾಪಾರಿಗಳ ಪ್ರತಿಭಟನೆ


ಚಿಕ್ಕಮಗಳೂರು: ನಗರದ ಬೀದಿ ಬದಿಯ ಹಣ್ಣು, ತರಕಾರಿ ಗಾಡಿಗಳನ್ನು ನಗರಸಭಾ ದಿಂದ ವ್ಯಾಪಾರ ನಡೆಸದಂತೆ ಗಾಡಿಗಳನ್ನು ವಶಕ್ಕೆ ಪಡೆದಿದ್ದು ವ್ಯಾಪಾರಿಗಳು ನಗರಸಭಾ ಕಛೇರಿ ಎದುರು ಅನೇಕ ಮಂದಿ ತಮ್ಮ ತಮ್ಮ ಗಾಡಿಗಳನ್ನು ತಂದು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ಸಂಬಂಧ ನಗರಸಭಾ ಉಪಾಧ್ಯಕ್ಷರಿಗೆ ಮನವರಿಕೆ ಮಾಡಿದ ವ್ಯಾಪಾರಿಗಳು ಪ್ರತಿದಿನ 4-5 ಸಾವಿರ ಬಂಡವಾಳ ಹಾಕಿ ವ್ಯವಹಾರ ನಡೆಸುವ ಬೀದಿ ಬದಿ ವ್ಯಾಪಾರಿಗಳು ಅಸಲಿನ ಅರ್ಧದಷ್ಟು ಲಾಭ ಗಳಿಸುವುದೇ ಕಷ್ಟಸಾಧ್ಯವಾಗಿದೆ. ಆದರೆ ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡಿದರೆ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಬಹುದು ಎಂದರು.

ನಗರಸಭಾ ಆಯುಕ್ತರು ಎಲ್ಲಾ ಗಾಡಿಗಳನ್ನು ಸಂತೆ ಮಾರ್ಕೆಟ್‍ನಲ್ಲಿ ನಿಲ್ಲಿಸಿ ವ್ಯಾಪಾರ ಮಾಡಿ ಎಂದು ಹೇಳುತ್ತಾರೆ. ಆದರೆ ವಾರಕ್ಕೊಮ್ಮೆ ಸಂತೆ ನಡೆಯುವುದು ಅದರಲ್ಲಿ ಎಷ್ಟೋ ಗಾಡಿಗಳು ನಿಲ್ಲುತ್ತವೆ. ಅದರಲ್ಲಿ ಯಾರಿಗೂ ಸರಿಯಾದ ವ್ಯಾಪಾರವಾಗುವುದಿಲ್ಲ. ಅವರವರಲ್ಲೇ ಕಿತ್ತಾಟಗಳು ಶುರುವಾಗುತ್ತವೆ ಎಂದು ಹೇಳಿದರು.

ಬೀದಿ ಬದಿಯಲ್ಲಿ ಗಾಡಿಗಳನ್ನು ಹಾಕಿದರೆ ಸಾರ್ವಜನಿಕರು ಸಂಚರಿಸುವಾಗ ಅಲ್ಲಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಯಾರೂ ಕೂಡಾ ಸಂತೆ ಮಾರ್ಕೆಟ್‍ನಲ್ಲಿ ಬಂದು ವ್ಯಾಪಾರ ಮಾಡುವುದಿಲ್ಲ. ಅವರ ಮನೆಗಳ ಸ್ಥಳೀಯ ರಸ್ತೆಗಳಲ್ಲಿ ಗಾಡಿಗಳನ್ನು ನಿಲ್ಲಿಸಿದಾಗ ಅವರಿಗೆ ಸಮೀಪವಾಗುತ್ತದೆ ಜೊತೆಗೆ ಬೀದಿ ಬದಿ ವ್ಯಾಪಾರಿಗಳು ಅನುಕೂಲವಾಗಲಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಮೇರ್ ಖಾನ್ ಹೇಳುತ್ತಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post