ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಂಬಲ್ ನದಿಗೆ ಕಾರು ಬಿದ್ದು; ಎಂಟು ಮಂದಿ ಸಾವು

ಚಂಬಲ್ ನದಿಗೆ ಕಾರು ಬಿದ್ದು; ಎಂಟು ಮಂದಿ ಸಾವು

 


ಕೋಟಾ: ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ.

ಕಾರಿ ನಲ್ಲಿದ್ದ ಎಂಟು ಮಂದಿ ಮದುವೆಗೆ ತೆರಳುತ್ತಿದ್ದರು. ವರ ಕೂಡ ಕಾರಿ ನಲ್ಲಿಯೇ ಇದ್ದ. ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಕಡೆಯವರು ಬೆಳಗ್ಗೆ ಮಾಧೋಪುರದಿಂದ ಉಜ್ಜಯನಿ ಕಡೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿದೆ. ನೀರಿಗೆ ಬಿದ್ದ ತಕ್ಷಣ ಕಾರಿನ ಕಿಟಕಿ ತೆಗೆಯಲು ಯತ್ನಿಸಿದ್ದು, ಒಂದು ಕಿಟಕಿ ಮಾತ್ರ ತೆರೆಯಲು ಸಾಧ್ಯ ಆಗಿದೆ.

ಸ್ಥಳೀಯರು ನೀರಿನಲ್ಲಿ ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಹಾರ ಕಾರ್ಯ ಆರಂಭವಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ.


0 تعليقات

إرسال تعليق

Post a Comment (0)

أحدث أقدم