ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಗಳ ನಡುವೆ ಡಿಕ್ಕಿ

ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಗಳ ನಡುವೆ ಡಿಕ್ಕಿ

 


ಬೆಂಗಳೂರು: ನೆಲಮಂಗಲಕ್ಕೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಗೆ ಬೈಕ್ ಅಡ್ಡ ಬಂದ ಪರಿಣಾಮ ಬಿಎಂಟಿಸಿ ಬಸ್ ಹಿಂಬದಿಯಿಂದ ಬಂದ ಕೆಎಸ್‌ಆರ್ಟಿಸಿ ಬಸ್ ಗೆ ಡಿಕ್ಕಿಯಾಗಿದೆ.

ಘಟನೆಯಿಂದ ಬಿಎಂಟಿಸಿ ಬಸ್‌ನಲ್ಲಿನ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ ಇಬ್ಬರು ಚಾಲಕರು ಗಲಾಟೆ ಮಾಡಿದ್ದಾರೆ. ಈ ಘಟನೆ ತುಮಕೂರು ರಸ್ತೆಯ ೮ನೇ ಮೈಲಿ ಬಳಿ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ.

ಪೀಣ್ಯ ಡಿಪೋಗೆ ಸೇರಿದ ನೆಲಮಂಗಲ, ತಾವರೆಕೆರೆ ಬಿಎಂಟಿಸಿ ಬಸ್ ಗೆ, ಹಾಗೂ ಬೆಂಗಳೂರಿನಿಂದ ಚಳ್ಳಕೆರೆ ಮಾರ್ಗದಲ್ಲಿ ರಾಯದುರ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಮಧ್ಯೆ ಈ ಡಿಕ್ಕಿ ಸಂಭವಿಸಿದೆ.


0 تعليقات

إرسال تعليق

Post a Comment (0)

أحدث أقدم