ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುರತ್ಕಲ್‌: ಆರನೇ ದಿನಕ್ಕೆ ಕಾಲಿರಿಸಿದ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿ

ಸುರತ್ಕಲ್‌: ಆರನೇ ದಿನಕ್ಕೆ ಕಾಲಿರಿಸಿದ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿ

ಗುಂಡಿ ತೋಡಿ ಮಣ್ಣಿನಡಿಯಲ್ಲಿ ಮಲಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ


ಸುರತ್ಕಲ್: ಸುರತ್ಕಲ್, ಎನ್ಐಟಿಕೆ ಅಕ್ರಮ ಟೋಲ್ ಗೇಟು ಸ್ಥಗಿತಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯು ಶನಿವಾರ ಆರನೇ ದಿನಕ್ಕೆ ಕಾಲಿರಿಸಿದೆ.


ಕಳೆದ ಹಲವಾರು ವರ್ಷಗಳಿಂದ ಎನ್ಐಟಿಕೆ ಅಕ್ರಮ ಅವೈಜ್ಞಾನಿಕ ಟೋಲ್ ಗೇಟ್ ವಿರುದ್ಧ ವಿವಿಧ ಸಂಘಟಿತ ಹೋರಾಟ ನಡೆಯುತ್ತಿದೆ, ಆದರೆ ರಾಜಕೀಯ ಪ್ರಭಾವದಿಂದಾಗಿ ಸರಕಾರದ ಕಾನೂನುಗಳನ್ನು ಮೀರಿ ಇಲ್ಲಿ ಅಕ್ರಮವಾಗಿ ಶುಲ್ಕ ವಸೂಲು ಮಾಡಲಾಗುತ್ತಿದೆ, ಈ ಟೋಲ್ ಗೇಟ್ ಮುಚ್ಚುವವರೆಗೆ ನಮ್ಮ ಹೋರಾಟಕ್ಕೆ ಅಂತ್ಯವಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಆಶಿಫ್ ಆಪತ್ಬಾಂಧವ ಮಾಧ್ಯಮಕ್ಕೆ ತಿಳಿಸಿದರು.


ಈ ನಡುವೆ ಸ್ಥಳೀಯ ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅಗಮಿಸಿ ಧರಣಿ ನಿರತ ವೇದಿಕೆಯಲ್ಲಿ ಟೋಲ್ ಗೇಟ್ ವಿರುದ್ಧ ಮಾತನಾಡುತ್ತಾ, ರಾಜಕೀಯವಾಗಿ ಸ್ಥಳೀಯ ಸಂಸದರಿಗೆ ಹಾಗೂ ಇನ್ನಿತರರ ಹೆಸರೆತ್ತಿ ಅವಾಚ್ಯ ಶಬ್ದಗಳನ್ನು ಬಳಸಿದ ಕಾರಣಕ್ಕೆ ಗರಂ ಆದ ಆಸಿಫ್ ಆಪದ್ಬಾಂಧವ, ಇದು ಚುನಾವಣೆಯ ಕಣ ಅಲ್ಲ; ಇದೊಂದು ರಾಜಕೀಯ ರಹಿತವಾಗಿ ನಡೆಯುತ್ತಿರುವ ಹೋರಾಟ ಎಂದು ಮಾಜಿ ಮೇಯರ್ ಹಾಗೂ ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.



ಪ್ರತಿಭಟನೆಯ ನಡುವೆ ವಿಶೇಷವಾಗಿ ಧರಣಿ ವೇದಿಕೆಯ ಮುಂದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗುಂಡಿ ತೋಡಿ ಮಣ್ಣಿನೊಳಗೆ ಮಲಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಸಾರ್ವಜನಿಕರ ಗಮನ ಸೆಳೆದರು.


ಸುರತ್ಕಲ್, ಕಾಟಿಪಲ್ಲ ವಲಯ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ಮುಖಂಡರಾದ ಹುಸೇನ್ ಕಾಟಿಪಲ್ಲ, ಸಲೀಂ ರಝಾಕ್, ಅಬ್ದುಲ್ ಖಯ್ಯಾಮ್, ವಾಸೀಂ, ಅಬ್ದುಲ್ ಸಮದ್, ಅಬ್ದುಲ್ ಲತೀಫ್, ಜಮಿಶೀದ್, ಅಶ್ರಫ್. ಸುರತ್ಕಲ್ ವಲಯ ಬಂಟ ಸಮುದಾಯದ ಪುಷ್ಪರಾಜ್ ಶೆಟ್ಟಿ, ಧನಂಜಯ ಶೆಟ್ಟಿ. ರಾಜ್ಯ ಡಿಜೆ-ಟ್ರಕ್ ಚಾಲಕ ಮಾಲಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಸುನಿಲ್ ಡಿಸೋಜ ಕಾರ್ಯದರ್ಶಿ ಸುಶಾಂತ್ ಶೆಟ್ಟಿ. ಹಿರಿಯ ಹೋರಾಟಗಾರ ಹರ್ಷರಾಜ್ ಮುಲ್ಕಿ, ಪ್ರಸಿದ್ಯ ಮಂಗಳೂರು, ಎಸ್ ಮೊಹಮ್ಮದ್ ತಡಂಬೈಲ್, ರಾಘವ ಇಡ್ಯಾ ಇನ್ನಿತರರು ಆಶಿಫ್ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post