ಬೆಂಗಳೂರು: ದಿವಂಗತ ನಟ ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಲು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಆಸ್ತಿ ಅಂದರೆ ಅದು ಸ್ನೇಹಿತರು. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ. ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ಪುನೀತ್ ರಾಜ್‌ಕುಮಾರ್‌ಗೆ ಅಭಿಮಾನಿಗಳು ಇದ್ದಾರೆ.
ಈ ಕಾರಣಕ್ಕೆ ಪುನೀತ್ ಅಗಲಿ ಮೂರು ತಿಂಗಳ ಬಳಿಕವೂ ನಟ ಅಲ್ಲು ಅರ್ಜುನ್ ಅಪ್ಪು ಮನೆಗೆ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿದ ಅಲ್ಲು ಅರ್ಜುನ್ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಲಿದ್ದಾರೆ.
ಬಳಿಕ ಸದಾಶಿವ ನಗರದ ಅಪ್ಪು ಮನೆಗೆ ಭೇಟಿ ನೀಡಲಿದ್ದಾರೆ. ಅಪ್ಪು ಅಗಲಿದ ದಿನದಿಂದ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರು ಆಗಮಿಸಿ ಪುನೀತ್ ಕುಟುಂಬಕ್ಕೆ ಸಮಾಧಾನ ಹೇಳುತ್ತಿದ್ದಾರೆ.
ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸವಿತ್ತು. ಆದರೆ ಈಗ ಅವರಿಲ್ಲ ಅಂದರೆ ತುಂಬಾ ನೋವಾಗುತ್ತದೆ ಎಂದು ಅಲ್ಲು ಅರ್ಜುನ್ ಭಾವುಕರಾಗಿದ್ದರು.
ಅಪ್ಪು ಅಗಲಿದ ಮೂರು ತಿಂಗಳ ಬಳಿಕ ಈಗ ಅಲ್ಲು ಅರ್ಜುನ್ ಅವರು ಅಪ್ಪು ನಿವಾಸಕ್ಕೆ ಮತ್ತೆ ಭೇಟಿ ನೀಡಿದ್ದಾರೆ.
إرسال تعليق