ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಗರ; ಒಣಗಿಸಲು ಹಾಕಿದ್ದ 21 ಕ್ವಿಂಟಾಲ್ ಅಡಕೆ ಕಳ್ಳತನ

ಸಾಗರ; ಒಣಗಿಸಲು ಹಾಕಿದ್ದ 21 ಕ್ವಿಂಟಾಲ್ ಅಡಕೆ ಕಳ್ಳತನ

 


ಸಾಗರ: ಆಚೆ ಮನೆಯ ಅಂಗಳದಲ್ಲಿ ಒಣಗಿಸಿದ್ದ 62 ಮೂಟೆ ಸಿಪ್ಪೆಗೋಟು ಅಡಕೆಯನ್ನು ರಾತ್ರಿ ವೇಳೆ ಕಳ್ಳತನ ಮಾಡಿದ ಘಟನೆಯೊಂದು ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ.

ಸುಮಾರು 21 ಕ್ವಿಂಟಾಲ್‌ ಅಡಕೆ ಕಳ್ಳತನ ಆಗಿರಬಹುದು ಎಂದು ಅಂದಾಜಿಲಾಗಿದ್ದು, ಈ ಅಡಕೆಯ ಮೌಲ್ಯ 4.20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ತಲವಾಟ ಗ್ರಾಮದ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ತಮ್ಮ ತಮ್ಮ ತೋಟದ ಗೋಟಡಿಕೆಯನ್ನು ಪಕ್ಕದ ಮನೆಯವರಾದ ಸತ್ಯನಾರಾಯಣ ನಾಗಾನಾಯ್ಕ ಅವರ ಖಾಲಿ ಜಾಗದಲ್ಲಿ ಒಣಗಿಸಿದ್ದರು.

ಅಡಕೆ ಸುಲಿ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ನೋಡಿದಾಗ ಮೋಹನ್ ಅವರಿಗೆ ಸೇರಿದ ಸುಮಾರು 45 ಚೀಲ ಹಾಗೂ ಕನ್ನಪ್ಪ ಅವರಿಗೆ ಸೇರಿದ ಸುಮಾರು 17 ಚೀಲ ಸಿಪ್ಪೇಗೋಟು ಕಳವಾಗಿದ್ದು, ಬುಧವಾರ ರಾತ್ರಿ ವೇಳೆ ನಡೆದಿದೆ.

ಈ ಬಗ್ಗೆ ಮೋಹನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



0 Comments

Post a Comment

Post a Comment (0)

Previous Post Next Post