ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಲೇಜು ವಿದ್ಯಾರ್ಥಿಗಳ ಬಳಿ 1ಕೆಜಿ ಗಾಂಜಾ ಪತ್ತೆ; ಇಬ್ಬರ ಬಂಧನ

ಕಾಲೇಜು ವಿದ್ಯಾರ್ಥಿಗಳ ಬಳಿ 1ಕೆಜಿ ಗಾಂಜಾ ಪತ್ತೆ; ಇಬ್ಬರ ಬಂಧನ

 


ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ ಆಗಿದ್ದು, ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ಇಬ್ಬರು ಸೆರೆಯಾಗಿದ್ದಾರೆ.

ಆರೋಪಿಗಳಾದ ಅಭಿಜಿತ್, ನಿತಿನ್​ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಗಾಂಜಾ ಪೆಡ್ಲರ್​ಗಾಗಿ ಪೊಲೀಸರ ಶೋಧ ಕಾರ್ಯ ನಡೆಸಲಾಗಿದೆ.

ಫೆಬ್ರವರಿ 11ರಂದು ರಾತ್ರಿ ಸಮಯದಲ್ಲಿ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಬೈಕ್​ ಚಾಲನೆ ಮಾಡಿದಾಗ ಅನುಮಾನಗೊಂಡು ಸ್ಥಳೀಯರು ಬೈಕ್ ತಡೆದು ವಿಚಾರಿಸಿದ್ದರು.

ಈ ವೇಳೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ 1 ಕೆಜಿ ಗಾಂಜಾ ಪತ್ತೆ ಆಗಿದೆ. ಆರೋಪಿಗಳನ್ನು ಸ್ಥಳೀಯರು ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

0 Comments

Post a Comment

Post a Comment (0)

Previous Post Next Post