ಪುತ್ತೂರು: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಯುವ ಜನ ಒಕ್ಕೂಟ (ರಿ) ಪುತ್ತೂರು ಸೌಜನ್ಯ ಯುವಜನ ಸಂಘ (ರಿ) ಸಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಾಗಾರ ಕಾರ್ಯಕ್ರಮ ಜನವರಿ 1 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಜದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಕಾಂತ್ ಪೂಜಾರಿ ಬಿರಾವು ಇವರು ಮಾತನಾಡಿ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶ್ರೀಮತು ಪ್ರಮೀಳಾ ಸೇವಾ ಪ್ರತಿನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ(ರಿ) ಮತ್ತು ಸೌಜನ್ಯ ಯುವಜನ ಸಂಘದ (ರಿ) ಸಾಜ ಇದರ ಅಧ್ಯಕ್ಷರಾದ ಅಣ್ಣುಮುರಂಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯುವಕ ಮಂಡಲ,ಮಹಿಳಾ ಮಂಡಲದ ಸದಸ್ಯ ಊರವರು ಭಾಗಿಯಾಗಿದ್ದರು. ಕಾರ್ಯಕ್ರಮ ಸಂಯೋಜಕರಾಗಿ ಗೌತಮ್ ರಾಜ್ ಕರಂಬಾರು ಮತ್ತು ಪ್ರಜ್ಞಾ ಕುಲಾಲ್ ಕಾವು ಸಹಕರಿಸಿದರು. ಕಾರ್ಯಕ್ರಮವನ್ನು ಹಮೀದ್ ಸಾಜ ನಿರೂಪಿಸಿದರು.
إرسال تعليق