ಪುಂಜಾಲಕಟ್ಟೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಪ್ರಯುಕ್ತ ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್, NSS, YRC ಮತ್ತು ಗ್ರಾಮ ಪಂಚಾಯಿತಿ ಮಡಂತ್ಯಾರು ಇವರ ಸಹಯೋಗದೊಂದಿಗೆ ಹೊಸ ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಗುರುವಾರ (ಜ.13) ನಡೆಸಲಾಯಿತು.
ಮಡಂತ್ಯಾರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಾಂಶುಪಾಲರಾದ ಪ್ರೊ.ರವಿಶಂಕರ್ ಅವರು ಮತದಾರರ ನೋಂದಣಿ ಅಭಿಯಾನದ ಕುರಿತು ಮಾತನಾಡಿದರು. ಮತದಾರರ ಗುರುತಿನ ಚೀಟಿಯ ಮತ್ತು ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸಿದರು.
ಕಾಲೇಜಿನ NSS, YRC ಹಾಗೂ ಮತದಾರರ ಸಾಕ್ಷರತಾ ಕ್ಲಬ್ ನ ಸ್ವಯಂಸೇವಕರು ಮನೆಮನೆಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟವರಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸುವ ಅರಿವನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ELC ಸಂಯೋಜಕರಾದ ಪ್ರೊ. ಶೇಖರ್, NSS ಸಂಯೋಜಕರಾದ ಪ್ರೊ. ರಾಜೇಶ್ವರಿ ಹಾಗೂ ಪ್ರೊ. ಸಂತೋಷ್ ಪ್ರಭು, YRC ಸಂಯೋಜಕರಾದ ಪ್ರೊ. ಗೀತಾ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಸೇರಿದಂತೆ NSS, YRC, ಸ್ವಯಂಸೇವಕರು ಉಪಸ್ಥಿತರಿದ್ದರು.
ಮಡಂತ್ಯಾರ್ ಗ್ರಾಮ ಪಂಚಾಯಿತಿಯ PDO ಪುರುಷೋತ್ತಮ್ ರವರು ಕಾರ್ಯಕ್ರಮವನ್ನು ಸ್ವಾಗತಿಸಿ ಧನ್ಯವಾದವಿತ್ತರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment