ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೂರಾರು ಮಂದಿಗೆ ಉಚಿತ ಮನೆ ನಿರ್ಮಿಸಿಕೊಟ್ಟಿದ್ದ ಹಿರಿಯ ಸಮಾಜಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ಇನ್ನಿಲ್ಲ

ನೂರಾರು ಮಂದಿಗೆ ಉಚಿತ ಮನೆ ನಿರ್ಮಿಸಿಕೊಟ್ಟಿದ್ದ ಹಿರಿಯ ಸಮಾಜಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ಇನ್ನಿಲ್ಲ

 


ಬದಿಯಡ್ಕ: ಕಾಸರಗೋಡಿನ ಹೆಸರಾಂತ ಸಮಾಜಸೇವಕ, ಕೊಡುಗೈ ದಾನಿ ಎಂದೇ ಪ್ರಸಿದ್ಧರಾದ, ನೂರಾರು ಮಂದಿ ಬಡವರಿಗೆ ಮನೆಗಳನ್ನು ಉಚಿತವಾಗಿ  ನಿರ್ಮಿಸಿಕೊಟ್ಟ ಕಿಳಿಂಗಾರು ನಿವಾಸಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಇಂದು ಮಧ್ಯಾಹ್ನ (ಜ.22) ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.


ಇದುವರೆಗೆ 265 ಬಡ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದ ಅವರು, ತಮ್ಮ ಬಳಿ ಸಹಾಯ ಯಾಚಿಸಿ ಬಂದ ಯಾರಿಗೂ ಇಲ್ಲ ಎನ್ನದೇ ಆರ್ಥಿಕ ನೆರವು ನೀಡಿದ ಮಹಾನುಭಾವರಾಗಿದ್ದಾರೆ.


ಶ್ರೀ ಸತ್ಯಸಾಯಿಬಾಬಾ ಅವರ ಅನನ್ಯ ಭಕ್ತರಾಗಿದ್ದ ಅವರು ತಮ್ಮ ಹೆಸರಿನಲ್ಲಿ ಸಾಯಿರಾಂ ವಿಶೇಷಣವನ್ನು ಹೊಂದಿದ್ದರು. ಕಿಳಿಂಗಾರಿನಲ್ಲಿ ತಮ್ಮ ಮನೆಯ ಸಮೀಪದಲ್ಲೇ ಶ್ರೀ ಸಾಯಿಮಂದಿರ ಎಂಬ ಸಮುದಾಯ ಭವನವನ್ನು ನಿರ್ಮಿಸಿ ಸಮಾಜದ ಬಳಕೆಗೆ ಒದಗಿಸಿದ್ದರು. ಅಲ್ಲದೆ ಉಚಿತ ಆರೋಗ್ಯ ಶಿಬಿರಗಳನ್ನು ನಿರ್ವಹಿಸುತ್ತಿದ್ದರು.


ಅವರು ಪತ್ನಿ ಶಾರದಾ ಭಟ್, ಪುತ್ರ- ಬದಿಯಡ್ಕ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಕೆ.ಎನ್ ಕೃಷ್ಣ ಭಟ್‌, ಪುತ್ರಿಯರಾದ ಶ್ಯಾಮಲಾ ಮತ್ತು ವಸಂತಿ ಅವರನ್ನು ಅಗಲಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post