ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ರಾಷ್ಟ್ರ ನಿರ್ಮಾಣಕ್ಕೆ ವಿವೇಕಾನಂದರ ಆದರ್ಶ ಅಗತ್ಯ'

'ರಾಷ್ಟ್ರ ನಿರ್ಮಾಣಕ್ಕೆ ವಿವೇಕಾನಂದರ ಆದರ್ಶ ಅಗತ್ಯ'

ತಾ.ಪಂ. ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ


ಪುತ್ತೂರು: ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ತರವಾಗಿರುವುದರಿಂದ ಸ್ವಾಮಿ ವಿವೇಕಾನಂದರ ಆದರ್ಶವನ್ನು ಅವರು ಅಳವಡಿಸಿಕೊಳ್ಳಬೇಕು ಎಂದು ತಹಶಿಲ್ದಾರ್ ರಮೇಶ್ ಬಾಬು ಹೇಳಿದರು.


ಅವರು ತಾ.ಪಂ. ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ, ಕರ್ನಾಟಕ ಯುವ ನೀತಿ 2021-22 ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.


ತಾ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಯುವಜನರಿಗೆ ಮಾದರಿ ಸ್ವಾಮಿ ವಿವೇಕಾನಂದರು ಅವರ ಸ್ಪೂರ್ತಿದಾಯಕ ಮಾತುಗಳು ಅವರ ಜೀವನ ಶೈಲಿ ಯುವಜನತೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಪದವಿ ಕಾಲೇಜಿನ ಲ್ಯಾಬ್ ಸಹಾಯಕ ನಾರಾಯಣ ಕುಂಬ್ರ ಮಾತನಾಡಿ, ಯುವ ನೀತಿ ಯು ಯುವಜನರ ಶಿಕ್ಷಣ ಉದ್ಯೋಗ, ಮೂಲಭೂತ ಸೌಕರ್ಯ ಮಾನಸಿಕತೆಯ ಆಧಾರದ ಮೇಲೆ ಗುರಿಯಾಗಿಸಿ ಇಟ್ಟುಕೊಂಡು ರೂಪಿಸಬೇಕು ಎಂದು ಅಭಿಪ್ರಾಯ ನೀಡಿದರು.


ಕಾರ್ಯಕ್ರಮದಲ್ಲಿ ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ರಾದ ದಿನೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕಿನ ಯುವಜನರ ಯುವ ನೀತಿಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಸ್ವಾಗತಿಸಿ, ಯುವ ಜನ ಒಕ್ಕೂಟದ ಕೋಶಾಧಿಕಾರಿ ಯಾದ ಹಮೀದ್ ಸಾಜ ವಂದಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post