ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಜುಂಗಾವು ವಿದ್ಯಾಪೀಠಕ್ಕೆ ಸ್ಟೀಲ್ ಕಪಾಟು ಕೊಡುಗೆ

ಮುಜುಂಗಾವು ವಿದ್ಯಾಪೀಠಕ್ಕೆ ಸ್ಟೀಲ್ ಕಪಾಟು ಕೊಡುಗೆ


    

ಕುಂಬಳೆ: ಮುಜುಂಗಾವು ವಿದ್ಯಾಪೀಠಕ್ಕೆ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಸ್ಟೀಲ್ ಕಪಾಟು ಉದಾರವಾಗಿ ನೀಡಿದರು. ಶಾಲಾ ವತಿಯಿಂದ ಆ ಕೊಡುಗೆಯನ್ನು ಸಭಾ ಕಾರ್ಯಕ್ರಮದ ಮೂಲಕ ಗುರುವಾರ (ಜ.6) ಗೌರವಪೂರ್ವಕ ಸ್ವೀಕರಿಸಲಾಯಿತು.


ಎಡನಾಡು ಸೇವಾಸಹಕಾರಿ ಬ್ಯಾಂಕಿನ ಕಮಿಟಿಯ ಅಧ್ಯಕ್ಷರಾದ ಶ್ರೀಯುತ ಜಯಂತ ಪಾಟಾಳಿಯವರು ಮುಜುಂಗಾವು ವಿದ್ಯಾಪೀಠದ ಕಮಿಟಿ ಅಧ್ಯಕ್ಷರಾದ ಶ್ರೀಯುತ ಎಸ್.ಎನ್. ರಾವ್ ಮುನ್ನಿಪ್ಪಾಡಿಯವರಿಗೆ ಕೊಡುಗೆಯನ್ನು ಹಸ್ತಾಂತರಿಸಿದರು. ಉದಾರ ಕೊಡುಗೆಯನ್ನು ಸ್ವೀಕರಿಸಿದ ಶ್ರೀಯುತ ಎಸ್.ಎನ್.ರಾವ್, ಕಮಿಟಿಯ ವಿಶಾಲ ಮನೋಭಾವವನ್ನು ಶ್ಲಾಘಿಸಿದರು.


ಬ್ಯಾಂಕ್ ಡೈರೆಕ್ಟರ್ ಶ್ರೀಯುತ ರಾಮಭಟ್ ಕಾರಿಂಜ ಹಳೆಮನೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಉಪಾಧ್ಯಕ್ಷರಾದ ಶ್ರೀ ಶ್ಯಾಮರಾಜ್ ದೊಡ್ಡಮಾಣಿ, ಮೊದಲಾದವರು ಕೊಡುಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದರು.


ಕಾರ್ಯಕ್ರಮದ ಪ್ರಸ್ತಾವನೆಯನ್ನು ಶಾಲಾ ಆಡಳಿತಾಧಿಕಾರಿಗಳಾದ ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ ಮಾಡಿದರೆ; ಶಾಲಾಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ನಿರೂಪಣೆಗೈದರು.

ಹತ್ತನೆ ತರಗತಿ ವಿದ್ಯಾರ್ಥಿನಿ ಕು| ಗ್ರೀಷ್ಮಾ ಸ್ವಾಗತ ಮಾಡಿ, ಹತ್ತನೆ ತರಗತಿ ಶ್ರವಣಕುಮಾರ ವಂದನಾರ್ಪಣೆಗೈದರು.

ವರದಿ: ವಿಜಯಾಸುಬ್ರಹ್ಮಣ್ಯ ಕುಂಬಳೆ, ಶಾಲಾ ಗ್ರಂಥಪಾಲಿಕೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم