ಕುಂಬಳೆ: ಗೋಕರ್ಣ ಮಂಡಲಾಧೀಶ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಹತ್ವಾಂಕ್ಷೆಯ ಕಾಮದುಘಾ ಯೋಜನೆಯ ಅಂತರ್ಗತವಾಗಿ ಕಾರ್ಯನಿರ್ವಹಿಸುತ್ತಿರುವ 'ಅಮೃತಧಾರಾ ಗೋಶಾಲೆ' ಬಜಕೂಡ್ಲುವಿನಲ್ಲಿರುವ ಗೋವುಗಳಿಗಾಗಿ ಮೇವು ಸಂಗ್ರಹಣಾ ಕಾರ್ಯವಾದ 'ಸೇವಾ ಅರ್ಘ್ಯ'ವು ಇತ್ತೀಚೆಗೆ (ಡಿ. 30) ಅಂಬಿಲಡ್ಕದ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೈದಾನದಲ್ಲಿ ನಡೆಯಿತು.
ಕುಂಬಳೆ ಬಂಬ್ರಾಣ ಸಮೀಪದ ಅಂಬಿಲಡ್ಕದಲ್ಲಿ ಬೆಳಗ್ಗೆ 9 ಗಂಟೆಗೆ ಪಂಚಾಯತ್ ವಾರ್ಡ್ ಮೆಂಬರ್ ಮೋಹನ ಬಂಬ್ರಾಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಮದುಘಾ ಯೋಜನೆಯ ಅಧ್ಯಕ್ಷರಾದ ಡಾ. ವೈ.ವಿ. ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗುಂಪೆ ವಲಯ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ಸ್ವಾಗತಿಸಿ, ಗುಂಪೆ ವಲಯ ಅಧ್ಯಕ್ಷ ಶಂಭು ಹೆಬ್ಬಾರ್ ಧನ್ಯವಾದ ಸಲ್ಲಿಸಿದರು. ಗುರುವಂದನೆ ಹಾಗೂ ಧ್ವಜಾರೋಹಣದೊಂದಿಗೆ ಆರಂಭವಾದ ಸೇವಾ ಅರ್ಘ್ಯದಲ್ಲಿ ಗೋವುಗಳಿಗಾಗಿ ಮುಳಿಹುಲ್ಲಿನ ಸಂಗ್ರಹಣೆಗೆ ಚಾಲನೆ ನೀಡಲಾಯಿತು.
ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಉಪಾಧ್ಯಕ್ಷೆ ಕುಸುಮಾ ಪೆರ್ಮುಖ, ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಹಾಮಂಡಲ ಸೇವಾಪ್ರಧಾನ ಅರವಿಂದ ದರ್ಭೆ, ಮುಳ್ಳೇರಿಯ ಮಂಡಲ ಮಾತೃಪ್ರಧಾನೆ ಗೀತಾಲಕ್ಷ್ಮಿ ಮುಳ್ಳೇರಿಯ, ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಂಗಳೂರು ಪ್ರಾಂತ್ಯ ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಸಹಿತ ಮುಳ್ಳೇರಿಯ ಮಂಡಲದ ವಿವಿಧ ವಲಯಗಳ ಘಟಕಾಧ್ಯಕ್ಷರು, ಪದಾಧಿಕಾರಿಗಳು ವಿದ್ಯಾರ್ಥಿಗಳು, ಮಾತೆಯರು, ನವಸೇವಾ ವೃಂದ ಅಂಬಿಲಡ್ಕದ ಶಂಕರ್ ಟೈಲರ್ ಬೆಜಪ್ಪೆ, ವೆಂಕಟ್ರಮಣ ಆಚಾರಿ ಮತ್ತು ಸಮಿತಿಯ ಸ್ವಯಂಸೇವಕರೂ ಮಹಿಳಾ ವೃಂದದವರೂ ಶ್ರಮದಾನದಲ್ಲಿ ಭಾಗಿಯಾದರು.
ಸಂಜೆ ವರೆಗೂ ಮುಂದುವರಿದ ಸೇವಾ ಅರ್ಘ್ಯದ ಮೂಲಕ ಎರಡು ಲಾರಿ ಹಾಗೂ ಒಂದು ಪಿಕಪ್ ವಾಹನ ತುಂಬುವಷ್ಟು ಮುಳಿಹುಲ್ಲನ್ನು ಸಂಗ್ರಹಿಸಲಾಯಿತು. ಶಾಂತಿಮಂತ್ರದೊಂದಿಗೆ ಮುಕ್ತಾಯವಾದ ಕಾರ್ಯಕ್ರಮದ ನಂತರ ಸಂಗ್ರಹವಾದ ಮೇವನ್ನು ಗೋಶಾಲೆಗೆ ಸಾಗಿಸಲಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಗೋವಿಗಾಗಿ ಮೇವು ಮೇವಿಗಾಗಿ ನಾವು 👍👍🌹
ReplyDeletePost a Comment