ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇನ್ನು ಮುಂದೆ ದೇವಸ್ಥಾನದ ಪ್ರಸಾದಕ್ಕೂ ವೈಜ್ಞಾನಿಕ ಪರೀಕ್ಷೆ

ಇನ್ನು ಮುಂದೆ ದೇವಸ್ಥಾನದ ಪ್ರಸಾದಕ್ಕೂ ವೈಜ್ಞಾನಿಕ ಪರೀಕ್ಷೆ


ಉಡುಪಿ: ಕೇಂದ್ರ ಸರ್ಕಾರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ದೇವಸ್ಥಾನಗಳಲ್ಲಿ ದೊರೆಯುವ ಪ್ರಸಾದದ ಗುಣಮಟ್ಟದ ಪರಿಶೀಲನೆಗೆ "ಭೋಗ್" ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು ಕರಾವಳಿಯ ನಾಲ್ಕು ದೇವಸ್ಥಾನಗಳಲ್ಲಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.

ಪ್ರಸಾದಗಳಲ್ಲಿ ಯಾವ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು? ಅದರ ಸಂಗ್ರಹಣೆ ಹೇಗೆ? ಯಾವ ವಸ್ತುಗಳನ್ನು ಅದರಲ್ಲಿ ಬಳಸಬಾರದು? ಮುಂತಾದ ಅನೇಕ ವಿಷಯಗಳ ಕುರಿತು ಸದಸ್ಯರು ಗಮನಿಸಲಿದ್ದಾರೆ. ಈ ಮೂಲಕ ಭಕ್ತರಿಗೆ ಉತ್ತಮ ಗುಣಮಟ್ಟ ಖಾತರಿಪಡಿಸಿದ ಪ್ರಸಾದವನ್ನು ನೀಡಬೇಕೆಂಬ ಉದ್ದೇಶವನ್ನು ಸರ್ಕಾರ ಹೊಂದಿದೆ.

ಮೊದಲಿಗೆ ಕರಾವಳಿಯ ನಾಲ್ಕು ದೇವಸ್ಥಾನಗಳಾದ ಉಡುಪಿ ಜಿಲ್ಲೆಯ ಕೊಲ್ಲೂರು, ದ.ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥೇಶ್ವರ, ಉತ್ತರ ಕನ್ನಡ ಶಿರಸಿಯ ಮಾರಿಕಂಬಾ ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದ್ದು ಉಳಿದಂತೆ ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ.

0 تعليقات

إرسال تعليق

Post a Comment (0)

أحدث أقدم