ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ದೈವಕ್ಕೆ ಅವಮಾನ ಮಾಡುತ್ತಿದ್ದಾರೋ ಅಥವಾ ದಲಿತರನ್ನು ನಿಂದಿಸುತ್ತಿದ್ದಾರೋ?!

ಅಭಿಮತ: ದೈವಕ್ಕೆ ಅವಮಾನ ಮಾಡುತ್ತಿದ್ದಾರೋ ಅಥವಾ ದಲಿತರನ್ನು ನಿಂದಿಸುತ್ತಿದ್ದಾರೋ?!


ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ಮುಸ್ಲಿಂ ಸಮುದಾಯದ ಮದುಮಗನನ್ನು ಕೊರಗಜ್ಜನ ವೇಷ ಹಾಕಿ ಹಿಂದೂಗಳ ದೈವವನ್ನು ಅಪಹಾಸ್ಯ ಮಾಡಿರುವುದು ಖಂಡನೀಯ ಘಟನೆಯಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ದೈವಕ್ಕೆ ಅವಮಾನ ಮಾಡುತ್ತಿದ್ದಾರೋ ಅಥವಾ ದಲಿತರನ್ನು ನಿಂದಿಸುತ್ತಿದ್ದಾರೋ?!


ಆಶ್ಚರ್ಯ ಅಂದರೆ ಇತ್ತೀಚಿನ ದಿನಗಳಲ್ಲಿ ಕೊರಗಜ್ಜನೇ ಯಾಕೆ ಟಾರ್ಗೆಟ್ ಆಗುತ್ತಿದ್ದಾನೆ..?! ಕೊರಗಜ್ಜ ತುಳುನಾಡಿನ ಕಾರಣಿಕ ದೈವ. ಆ ದೈವವನ್ನು ಅವಮಾನಿಸುವ ಮೂಲಕ ಆ ದೈವವು ಪ್ರತಿನಿಧಿಸುವ ಜನಾಂಗವನ್ನೂ ನಿಂದಿಸಿದಂತಾಗಿದೆ. ಇಂತಹ ಘಟನೆಗಳಿಗೆ ಈಗಲೇ ಕಾನೂನಾತ್ಮಕ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳು ಕಠಿಣವಾಗಿ ಪರಿನಮಿಸಬಹುದು.


ಹಾಗಾಗಿ ಮಂಗಳೂರು ಕಮಿಷನರೇಟ್, ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.


-ಕಾ.ವೀ.ಕೃಷ್ಣದಾಸ್, ಮಂಗಳೂರು

ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು

8310388415


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم