ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಂಜಿಕಲ್ಲು: ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ಜಾತ್ರೆ ಸಮಾಪನ

ಪಂಜಿಕಲ್ಲು: ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ಜಾತ್ರೆ ಸಮಾಪನ


ಬಂಟ್ವಾಳ: ಇಲ್ಲಿನ ಇತಿಹಾಸ ಪ್ರಸಿದ್ಧ ಪಂಜಿಕಲ್ಲು ಭಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬುಧವಾರ ರಾತ್ರಿ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆದು ಮೂರು ದಿನಗಳ ವಾರ್ಷಿಕ ಜಾತ್ರೆ ಮುಕ್ತಾಯಗೊಂಡಿತು. ಇದೇ ವೇಳೆ ಸಂಪ್ರದಾಯದಂತೆ ಕೋಟಿ-ಚೆನ್ನಯರು ಸುರಿಯ ಹಾಕಿಕೊಳ್ಳುವುದು ಸಹಿತ ಮಾಯಂದಾಲೆ ನೇಮ ನಡೆಯಿತು.


ಇಲ್ಲಿನ ಎತ್ತರದ ಗರಡಿಯಿಂದ ಬಾಕಿಮಾರು ಗದ್ದೆಗೆ ಬ್ರಹ್ಮಬೈದರ್ಕಳರು ಮತ್ತು ಕೋಟಿ-ಚೆನ್ನಯರು ಇಳಿಯುವ ದೃಶ್ಯ ಜಿಲ್ಲೆಯಲ್ಲೇ ವೈಶಿಷ್ಟ್ಯಪೂರ್ಣವಾಗಿ ಗುರುತಿಸಿಕೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಜನಸಂದಣಿ ಕಂಡು ಬಂದಿಲ್ಲ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.


ಆಡಳಿತ ಮೊಕ್ತೇಸರೆ ಚಂದನಾದೇವಿ ಡಾ.ಪದ್ಮರಾಜ್ ಜೈನ್, ಮೊಕ್ತೇಸರ ಭರತ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ರಘುಚಂದ್ರ ಚೌಟ, ಕೋಟಿ ಪೂಜಾರಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಿ.ಪ್ರಕಾಶ್ ಕುಮಾರ್ ಜೈನ್, ಅಧ್ಯಕ್ಷ ಕೆ.ಎನ್.ಶೇಖರ, ಪ್ರಮುಖರಾದ ಗಣೇಶ ಪ್ರಭು, ರವಿ.ಎನ್.ಪೂಜಾರಿ, ಜಯ ಮಡಿವಾಳ, ಕೇಶವ ಪೂಜಾರಿ ಮತ್ತಿತರರು ಇದ್ದರು.




ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಜಿ ಸಚಿವ ಬಿ.ರಮಾನಾಥ ರೈ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಭೇಟಿ ನೀಡಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم