ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು: ಹೆರಿಗೆಗೆಂದು ಬಂದ ಗರ್ಭಿಣಿ ಮತ್ತು ಮಗು ಸಾವು

ಮಂಗಳೂರು: ಹೆರಿಗೆಗೆಂದು ಬಂದ ಗರ್ಭಿಣಿ ಮತ್ತು ಮಗು ಸಾವು

 


ಮಂಗಳೂರು: ಇಲ್ಲಿಯ ಕಂಕನಾಡಿಯಲ್ಲಿ ಹೆರಿಗೆಗೆಂದು ಬಂದ ಗರ್ಭಿಣಿ ಮತ್ತು ಮಗು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.

ಇಂದು ಬೆಳಿಗ್ಗೆ ವಿಟ್ಲದ ಸವಿತಾ ಎಂಬವರು ಹೆರಿಗೆಗೆ ಮಂಗಳೂರಿನ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಬಂದಿದ್ದರು.

ಆ ವೇಳೆಗೆ ಗರ್ಭಿಣಿ ಹೊಟ್ಟೆಯಲ್ಲಿರುವ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದರು. ಸಂಜೆಯ ವೇಳೆಗೆ ಗರ್ಭಿಣಿ ತಾಯಿ ಕೂಡ ಮೃತಪಟ್ಟಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿದ್ದು,  ಹೊಟ್ಟೆಯಲ್ಲಿದ್ದ ಮಗುವನ್ನು ತೆಗೆಯದೆ ಗರ್ಭಿಣಿ ಮೃತಪಟ್ಟಿದ್ದಾರೆ ಎಂಬುದು ಸಂಬಂಧಿಕರ ಆರೋಪಿಸಿದ್ದಾರೆ.

ಘಟನೆಯ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದರು.

0 تعليقات

إرسال تعليق

Post a Comment (0)

أحدث أقدم