ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೀವ-ಜೀವನಗಳ ನಡುವಿನ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಬೇಕು: ಬಿ.ಎಂ. ಅಪ್ಪಾಜಪ್ಪ

ಜೀವ-ಜೀವನಗಳ ನಡುವಿನ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಬೇಕು: ಬಿ.ಎಂ. ಅಪ್ಪಾಜಪ್ಪ


ಮಂಡ್ಯ: ಜೀವ ಮತ್ತು ಜೀವನಗಳ ನಡುವಿನ ಸಂಘರ್ಷಗಳನ್ನು ಸಮಸ್ಯೆಗಳನ್ನು ಧೈರ್ಯವಾಗಿ ಸಮರ್ಥವಾಗಿ ಎದುರಿಸುವುದೇ ನಿಜವಾದ ಸಾರ್ಥಕ್ಯ ಎಂದು ಕಲಾಪೋಷಕ ಲಯನ್ ಬಿ.ಎಂ. ಅಪ್ಪಾಜಪ್ಪ ಅಭಿಪ್ರಾಯ ಪಟ್ಟರು.


ನಗರದ ಶ್ರೀ ರಂಜಿನಿ ಕಲಾವೇದಿಕೆ, ಕೃಷಿಕ್ ಲಯನ್ಸ್ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 35ನೇ ವರ್ಷದ ನಿರಂತರ ಹೊಸ ವರ್ಷಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

 

ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ವೇದಿಕೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಅಪ್ಪಾಜಪ್ಪ, ಕಲೆ ಸಂಗೀತ. ಸಾಹಿತ್ಯ ಕಲಾ ಪ್ರಕಾರಗಳು ಮನುಷ್ಯನ ಮನಸನ್ನು ಅರಳಿಸಿ ಬದುಕಿಗೆ ಚೇತನವನ್ನು ನೀಡುತ್ತವೆ. ನೂರಾರು ಪ್ರತಿಭಾನ್ವಿತ ಕಲಾವಿದರನ್ನು ರೂಪಿಸುತ್ತಿರುವ ಕಲಾಶ್ರೀ ವಿದ್ಯಾಶಂಕರ್ ಅವರ ನಿರಂತರ ಪ್ರಯತ್ನಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು. ಕಲೆಯ ಬೆಳವಣಿಗೆಗೆ ಪೂರಕವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಸಮಾರಂಭದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಜನರ ಬದುಕಿನ ನಡೆಗೆ ಸಂಗೀತ ಸಾಹಿತ್ಯ ಕಲೆಗಳು ಆತ್ಮ ವಿಶ್ವಾಸವನ್ನು ನೀಡುತ್ತವೆ. ಇಂತಹ ಕಲಾ ಸೇವೆಯನ್ನು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದ್ದು ಇದು ವ್ಯವಸ್ಥಾಪಕರ ಸಾಹಿತ್ಯ ಸಂಸ್ಕೃತಿಯ ಬಗೆಗಿನ ಕಾಳಜಿಯ ಪ್ರತೀಕವಾಗಿದ್ದು ಇಂತಹ ಒಳ್ಳೆಯ ಆಶಯವುಳ್ಳ ಕಾರ್ಯಕ್ರಮಗಳಿಗೆ ಜನತೆ ತುಂಬು ಮನಸ್ಸಿನ ಸಹಕಾರ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.


ಸಮಾರಂಭದಲ್ಲಿ ಲಯನ್ ಡಾ.ನಾಗರಾಜ್ ಬಾಯರಿ ಸನ್ಮಾನಿತರ ಪರವಾಗಿ ಮಾತನಾಡಿ ಶುಭ ಹಾರೈಸಿದರು.


ಸಮಾರಂಭದಲ್ಲಿ ಸಿದ್ದಲಿಂಗಯ್ಯ ಬನ್ನಂಗಾಡಿ ಅವರಿಗೆ ಶ್ರೀರಂಜಿನಿ ಶರಣ ಸಾಹಿತ್ಯ ರತ್ನ ಪ್ರಶಸ್ತಿ, ಕಮಲ ರಾಜೇಶ್ ತುಮಕೂರು (ಶ್ರೀರಂಜಿನಿ ಸಾಹಿತ್ಯ ರತ್ನ), ಶ್ರೀಮತಿ ಶಿಲ್ಪ ಸತ್ಯಾನಂದ್, ಮಂಡ್ಯ (ಶ್ರೀರಂಜಿನಿ ಶಿಕ್ಷಣ ರತ್ನ ಪ್ರಶಸ್ತಿ), ನೃತ್ಯ ಕಲಾವಿದೆ ಸಿ.ಕೆ. ಚಂದನಾ (ಶ್ರೀರಂಜಿನಿ ನೃತ್ಯ ರತ್ನ ಪ್ರಶಸ್ತಿ), ಲಯನ್ ಡಾ. ನಾಗರಾಜ್ ಬಾಯರಿ (ಶ್ರೀರಂಜಿನಿ ಸಮಾಜ ಸೇವಾ ರತ್ನ) ಹಾಗೂ ಶ್ರೀರಂಜಿನಿ ರಂಗರತ್ನ ಪ್ರಶಸ್ತಿಯನ್ನು  ಖ್ಯಾತ ಯುವ ತಬಲ ವಾದ ಕುಮಾರಸ್ವಾಮಿ (ಗುಂಡಣ್ಣ) ಅವರಿಗೆ ಮಾಜಿ ಸಚಿವ ಆತ್ಮಾನಂದ, ಡಾ.ಟಿ.ಎಸ್. ಸತ್ಯನಾರಾಯಣ ರಾವ್, ನೀನಾ ಪಟೇಲ್, ಜಿ.ವಿ. ನಾಗರಾಜ್, ಹಾಗೂ ಇತರ ಗಣ್ಯರು ಪ್ರದಾನಿಸಿದರು.


ಹೊಸ ವರ್ಷದ ಶುಭಾಶಯವನ್ನು ಕೃಷಿಕ್ ಲಯನ್ಸ್ ಆಡಳಿತಾಧಿಕಾರಿ ವಕೆ.ಟಿ.ಹನುಮಂತು ಕೋರಿದರು. ಅಭಿನಂದನಾ ಭಾಷಣವನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಹೆಚ್.ಎಸ್.ಮುದ್ದೇಗೌಡ ಮಾಡಿದರು. ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಹಿರಿಯ ವಕೀಲ. ಪಿ.ಎಂ ಸೋಮಶೇಖರ್ ಹಾಗೂ ಡಾ.ಮುದ್ದೇಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.


ಕು.ಮೃಢಾಣಿ ಪ್ರಾರ್ಥಿಸಿದರು. ವೇದಿಕೆ ಅಧ್ಯಕ್ಷ, ವ್ಯವಸ್ಥಾಪಕ ಕಲಾಶ್ರೀ ವಿದ್ಯಾಶಂಕರ್ ಸ್ವಾಗತಿಸಿದರು. ವೇದಿಕೆಯಲ್ಲಿ ಉದ್ಯಮಿ ಮಂಜುನಾಥ್, ಎ.ನಾಗರಾಜ್, ಎಂ.ವಿ. ಧರಣೇಂದ್ರಯ್ಯ, ಕೆ.ಟಿ. ಶಂಕರೇಗೌಡ, ಬಸವರಾಜು, ಹರ್ಷ ಪೇಟ್ಕರ್, ಡಾ.ಶ್ರೀ ನಿವಾಸ ಶೆಟ್ಟಿ ಇತರರು ಭಾಗವಹಿಸಿದ್ದರು.


ಹೊಸ ವರ್ಷದ ಅಂಗವಾಗಿ ಶ್ರೀ ಶಂಕರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕೀ ಬೋರ್ಡ್ ವಾದನ; ಕಲಾಶ್ರೀ ವಿದ್ಯಾಶಂಕರ್ ತಂಡದ ಗಾಯನ ಹಾಗೂ ಖ್ಯಾತ ಗಿಟಾರ್ ವಾದಕ ದೇವರಾಜ್ ತಂಡದ ಗಿಟಾರ್ ವಾದನ ಕಾರ್ಯಕ್ರಮ ಅಪಾರ ಮೆಷ್ಷುಗೆಗೆ ಪಾತ್ರವಾಯಿತು. ಶ್ರೀಮತಿ ದೃಶ್ಯ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم