ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಮತ್ತು ಬೈಕ್ ಅಪಘಾತ; ಬೈಕ್ ನಲ್ಲಿದ್ದ ಮಹಿಳೆ ಸಾವು

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ನಲ್ಲಿದ್ದ ಮಹಿಳೆ ಸಾವು

 


ಶಹಾಪುರ: ತಾಲ್ಲೂಕಿನ ವಿಭೂತಿ ಹಳ್ಳಿ ಗ್ರಾಮದ ಸಮೀಪ‌ ಟಿಪ್ಪರ್‌ ಲಾರಿ ಡಿಕ್ಕಿಯಾದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತ ಮಹಿಳೆ ಭಾಗಮ್ಮ (45) ಟಿಪ್ಪರ್ ಹಿಂಬದಿ ಚಕ್ರದಡಿ ಸಿಲು‌ಕಿ‌ ಮೃತಪಟ್ಟಿದ್ದಾರೆ.

ಬೈಕ್ ಸವಾರ ಮಹಾದೇವಪ್ಪ ಸಣ್ಣ‌ಪುಟ್ಟ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ‌‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಸಗರ ಗ್ರಾಮದವರಾದ ಮಹಾದೇವಪ್ಪ ಅಬ್ಸಿಹಾಳ ಮತ್ತು ಪತ್ನಿ ಭಾಗಮ್ಮ ಬೆಂಗಳೂರಿನಿಂದ ಸಂಕ್ರಾಂತಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಶಹಾಪುರದಲ್ಲಿ ಹಬ್ಬದ ಸಂತೆ ಮಾಡಿಕೊಂಡು ಸಗರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯೆ ಈ ಅಪಘಾತ ನಡೆದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post