ಕಲಬುರಗಿ: ಕುರಿಗಾಹಿಯ ಮೇಲೆ ಕಲ್ಲು ಎತ್ತಿ ಹಾಕಿ, ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಜಿವಣಗಿ ಗ್ರಾಮದ ಶಿವಪುತ್ರ (30) ಎಂಬಾತ ಹತ್ಯೆಗೀಡಾದ ಯುವಕನಾಗಿದ್ದಾನೆ.
ಶಿವಪುತ್ರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಿವಾಸಿಯಾಗಿದ್ದು, ಕುರಿ ಮೇಯಿಸಿಕೊಂಡು ಯಾದಗಿರಿಯಿಂದ ಕಲಬುರಗಿ ಕಡೆಗೆ ಕುಟುಂಬ ಸಮೇತ ಬಂದಿದ್ದ.
ಇವರ ಜೊತೆಗೆ ಯಾದಗಿರಿಯಿಂದ ಇನ್ನೋರ್ವ ಕುರಿಗಾಹಿ ಕುಟುಂಬ ಸಹಿತ ಬಂದಿದ್ದು,ಇಬ್ಬರು ಒಂದೇ ಊರಲ್ಲಿ ಕುರಿ ಮೇಯಿಸುವುದಕ್ಕೆ ಮುಂದಾಗಿದ್ದರು.
ಕುರಿ ಮೇಯಿಸುವ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಗಲಾಟೆ ವೇಳೆ ಶಿವಪುತ್ರನ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಈ ಬಗ್ಗೆ ಮಾಡಬೂಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق