ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 18 ವರ್ಷದೊಳಗಿನ ಮಕ್ಕಳ ಪೋಷಣೆ ಭತ್ಯೆ ಗೆ ಅರ್ಜಿ ಅಹ್ವಾನ

18 ವರ್ಷದೊಳಗಿನ ಮಕ್ಕಳ ಪೋಷಣೆ ಭತ್ಯೆ ಗೆ ಅರ್ಜಿ ಅಹ್ವಾನ

 


ಮಡಿಕೇರಿ: ಮಕ್ಕಳನ್ನು ಮನೆಯಲ್ಲಿ ಸಾಕಲು ಹಾಗೂ ಮಕ್ಕಳನ್ನು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣ ಮುಂದುವರಿಕೆಗೆ ಉತ್ತೇಜಿಸಲು ಪೋಷಣಾ ಭತ್ಯೆ ನೀಡಲಾಗುವುದು.


ಮಕ್ಕಳ ವೈದ್ಯಕೀಯ, ಪೌಷ್ಠಿಕ ಆಹಾರ, ಶೈಕ್ಷಣಿಕ ವೃತ್ತಿ ತರಬೇತಿ ಮತ್ತು ಇತರೆ ಅವಶ್ಯಕತೆ ಪೂರೈಸಲು ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಸಲುವಾಗಿ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ರಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪ್ರಾಯೋಜಕತ್ವದಡಿ ಪಾಲನೆ ಮತ್ತು ಪೋಷಣೆ ಅಗತ್ಯವಿರುವ 0-18 ವರ್ಷದೊಳಗಿನ ಮಕ್ಕಳಿಗೆ ತಿಂಗಳಿಗೆ ರೂ.


ಒಂದು ಸಾವಿರ ಗಳಂತೆ 3 ವರ್ಷಗಳವರೆಗೆ ಒಂದು ಕುಟುಂಬದ ಗರಿಷ್ಠ 2 ಮಕ್ಕಳಿಗೆ ಪೋಷಣಾ ಭತ್ಯೆ ನೀಡುವ ಕಾರ್ಯಕ್ರಮಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.


ತಂದೆ/ ಕುಟುಂಬದ ದುಡಿಯುವ ಸದಸ್ಯರನ್ನು ಕಳೆದುಕೊಂಡಿದ್ದಲ್ಲಿ, ತಂದೆ ತಾಯಿ ಇಲ್ಲದ ಮಕ್ಕಳಿಗೆ, ತಂದೆ ತಾಯಿಗಳು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ, ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಜೈಲಿನಲ್ಲಿದ್ದರೆ, ಅಂತಹ ಕುಟುಂಬದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post