ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಬ್ಬಳ್ಳಿ: ಚಾಲನೆ ವೇಳೆ ಮೂರ್ಛೆ ತಪ್ಪಿದ ಬಸ್ ಚಾಲಕ; ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ಬಸ್‌ ಡಿಕ್ಕಿ

ಹುಬ್ಬಳ್ಳಿ: ಚಾಲನೆ ವೇಳೆ ಮೂರ್ಛೆ ತಪ್ಪಿದ ಬಸ್ ಚಾಲಕ; ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ಬಸ್‌ ಡಿಕ್ಕಿ

 


ಹುಬ್ಬಳ್ಳಿ: ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿದ್ದ ಬೇಂದ್ರೆ ಖಾಸಗಿ ಬಸ್‌ನ ಚಾಲಕನಿಗೆ ಚಾಲನೆ ಮಾಡುವಾಗ ಮೂರ್ಛೆ ಕಾಣಿಸಿಕೊಂಡಿದ್ದರಿಂದ ರಸ್ತೆ ಬದಿ ನಿಂತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಚಾಲಕ ಬಸವರಾಜ ಶಾಂತಪ್ಪ ಕುಂದಗೋಳ ಮೂರ್ಛೆ ರೋಗದಿಂದ ಬಳಲಿದವರು. 

ಘಟನೆಯಲ್ಲಿ ಯಾವುದೇ ಯಾರಿಗೂ ತೊಂದರೆಯಾಗಿಲ್ಲ. ಬಸ್ ಧಾರವಾಡ ಕಡೆಯಿಂದ ಬರುತ್ತಿದ್ದಾಗ ಉಣಕಲ್ ಕ್ರಾಸ್ ಬಳಿ ಮಧ್ಯಾಹ್ನ 1.15ಕ್ಕೆ ಘಟನೆ ನಡೆದಿದೆ.

ಬೈಕ್‌ಗಳತ್ತ ನುಗ್ಗಿದ ಬಸ್ ನಿಲ್ಲಿಸುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ. ನಂತರ ಪ್ರಯಾಣಿಕರು ಹಾಗೂ ಸ್ಥಳೀಯರು ಚಾಲಕನನ್ನು ಆರೈಕೆ ಮಾಡಿ, ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಬಸ್‌ ಡಿಕ್ಕಿಯಿಂದ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಸ್ಥಳಕ್ಕೆ ಭೇಟಿ ನೀಡಿ ಬಸ್‌ನಡಿ ಸಿಲುಕಿದ್ದ ಬೈಕ್‌ಗಳನ್ನು ತೆರವುಗೊಳಿಸಲಾಯಿತು. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

0 Comments

Post a Comment

Post a Comment (0)

Previous Post Next Post