ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನ್ಯಮತೀಯರ ಪ್ರೀತಿ-ಪ್ರೇಮದ ನಾಟಕಕ್ಕೆ ಮರುಳಾದರೆ ಉಗ್ರರ ಕ್ಯಾಂಪಿಗೆ ಸೇರ ಬೇಕಾದೀತು: ಡಾ. ಭರತ್ ಶೆಟ್ಟಿ ಎಚ್ಚರಿಕೆ

ಅನ್ಯಮತೀಯರ ಪ್ರೀತಿ-ಪ್ರೇಮದ ನಾಟಕಕ್ಕೆ ಮರುಳಾದರೆ ಉಗ್ರರ ಕ್ಯಾಂಪಿಗೆ ಸೇರ ಬೇಕಾದೀತು: ಡಾ. ಭರತ್ ಶೆಟ್ಟಿ ಎಚ್ಚರಿಕೆ


 

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಮಾಜಿ ಶಾಸಕರೊಬ್ಬರ ಕುಟುಂಬದ ಕೆಲ ಸದಸ್ಯರಿಂದ  ಐಸಿಸ್ ಉಗ್ರ ಸಂಘಟನೆಗೆ ಸ್ಥಳೀಯ ಯುವಕರ ಸೇರ್ಪಡೆಗೆ ವ್ಯವಸ್ಥಿತ ಸಂಚು ನಡೆಸಿರುವುದು ಆಘಾತಕಾರಿ ಯಾಗಿದೆ. ಅನ್ಯಮತೀಯರ ಪ್ರೀತಿ-ಪ್ರೇಮದ ನಾಟಕಕ್ಕೆ ಮರುಳಾದರೆ ಉಗ್ರರ ಕ್ಯಾಂಪು ಸೇರಬೇಕಾದೀತು ಎಂದು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.


ಈ ಕುಟುಂಬದ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದ ಹಿಂದೂ ಯುವತಿಗೆ ತನ್ನ ತಪ್ಪಿನ ಅರಿವಾಗುವ ಮುನ್ನವೇ ಮತಾಂತರಗೊಳಿಸಿದ್ದು ಮಾತ್ರವಲ್ಲದೆ, ಯಾವುದೇ ಕರುಣೆಯನ್ನು ಕೂಡ ತೋರಿಸದೆ ಉಗ್ರ ಚಟುವಟಿಕೆಗೆ ಬಳಸಿಕೊಂಡಿರುವುದು ಸಾಬೀತಾಗಿದೆ. ಈ ಪ್ರಕರಣ ಹಿಂದೂ ಸಂಘಟನೆಗಳ ಲವ್ ಜಿಹಾದ್ ಕೂಗಿಗೆ ಉತ್ತರವನ್ನು ನೀಡಿದೆ.  


ವೋಟ್ ಬ್ಯಾಂಕ್ ರಾಜಕಾರಣ, ತುಷ್ಟೀಕರಣ ನೀತಿಯಿಂದ ಕೆಲವೊಂದು ರಾಜಕೀಯ ಪಕ್ಷಗಳು ಮತಾಂತರ, ಲವ್ ಜಿಹಾದ್  ಬಗ್ಗೆ ಮೌನ ತಾಳಿದ್ದು ರಾಜಕೀಯ ನಾಯಕರ ದ್ವಿಮುಖ ನೀತಿಯನ್ನು ಬಯಲಿಗೆಳೆದಿದೆ. 


ಪ್ರೀತಿ-ಪ್ರೇಮದ ನಾಟಕವಾಡಿ ಮತಾಂತರ ಮಾಡಿ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುವ ವ್ಯವಸ್ಥಿತ  ಸಂಚಿನ ಬಗ್ಗೆ ಕೇರಳ ಸಹಿತ ಹಲವಡೆ ಪ್ರಕರಣಗಳು ಕಂಡು ಬಂದರೂ, ಬಿಜೆಪಿ ಹೊರತುಪಡಿಸಿ ಅನ್ಯ ರಾಜಕೀಯ ಪಕ್ಷಗಳು ಆಡಳಿತದಲ್ಲಿರುವ ಸರಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ತಾಳುತ್ತಾ ಇಲ್ಲಿಯವರೆಗೆ ಬಂದಿದ್ದರಿಂದ ಮತಾಂತರ ಹಾಗೂ ಉಗ್ರ ಚಟುವಟಿಕೆ ಕಬಂಧ ಬಾಹು ಇಷ್ಟು ಬೆಳೆಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.  


ಉಳ್ಳಾಲ ಉಗ್ರ ಚಟುವಟಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ ಸಮಗ್ರವಾಗಿ ತನಿಖೆ ಕೈಗೆತ್ತಿಕೊಂಡಿದ್ದು ಉಗ್ರಗಾಮಿ ಚಟುವಟಿಕೆಯನ್ನು ಬೇರುಸಹಿತ ಕಿತ್ತೆಸೆಯಲು ಜಿಲ್ಲಾ ಸಮುದಾಯ ಒಗ್ಗೂಡಿ ತನಿಖಾ ದಳಕ್ಕೆ ಸಹಕರಿಸಬೇಕಿದೆ. 


ಯಾರು ಕೂಡ ಉಗ್ರಗಾಮಿ ಚಟುವಟಿಕೆಗೆ ಪ್ರೇರಣೆ, ಬೆಂಬಲ ನೀಡದೆ ಸುರಕ್ಷಿತ ದಕ್ಷಿಣ ಕನ್ನಡ ಜಿಲ್ಲೆಯನ್ನಾಗಿ ಮುಂದೆಯೂ ಇರುವಂತೆ ಮಾಡಲು ಎಲ್ಲರೂ ಸಹಕರಿಸಬೇಕು. ಪೋಷಕರನ್ನು ಹಿರಿಯರ ಮಾತನ್ನು ಕಡೆಗಣಿಸಿ ಪ್ರೀತಿಗೆ ಮರುಳಾಗಿ ಕುಟುಂಬದಿಂದ ಹೊರನಡೆಯುವ ಹಿಂದೂ ಸಮುದಾಯದ ಯುವತಿಯರು ಈ ಘಟನೆಯಿಂದ ಎಚ್ಚೆತ್ತು ಕೊಳ್ಳಬೇಕು ಎಂದು ಶಾಸಕ ಭರತ್ ಶೆಟ್ಟಿ ವೈ ಕಳಕಳಿಯ ಮನವಿ ಮಾಡಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم