ಉಳ್ಳಾಲ: ಪ್ರಿಯಕರನಿಗೆ ಮತ್ತೊಂದು ಹುಡುಗಿಯ ಜೊತೆಗೆ ಸಂಬಂಧ ಇದೆ ಎಂದು ಬೇಸರಗೊಂಡ ಯುವತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದ್ದು, ಸಮುದ್ರಕ್ಕೆ ಹಾರಿದ್ದ ಯುವತಿಯನ್ನು ರಕ್ಷಿಸಲಾಗಿದೆ.
ಮೃತರನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ (28) ಯಾನೆ ಲಾಯ್ ಎಂದು ಗುರುತಿಸಲಾಗಿದೆ. ಕೋಟೆಕಾರು ನಿವಾಸಿ ಅಶ್ವಿತ ಫೆರಾವೊ(22)ಆತ್ಮ ಹತ್ಯೆಗೆ ಯತ್ನಿಸಿ ಪಾರಾದ ಯುವತಿ.
ಲಾಯ್ಡ್ ಬೇರೊಂದು ಯುವತಿ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದ ಅಶ್ವಿತಾ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ್ದರೆನ್ನಲಾಗಿದೆ.
ಆಕೆಯನ್ನು ರಕ್ಷಿಸಲೆಂದು ತಕ್ಷಣ ಲಾಯ್ಡ್ ಸಮುದ್ರಕ್ಕೆ ಜಿಗಿದಿದ್ದಾರೆ. ಆದರೆ ಅವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ಅಶ್ವಿತಾ ರಕ್ಷಿಸಲ್ಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
Post a Comment