ಚಿಕ್ಕಮಗಳೂರು: ನಗರದ ತೊಗರಿ ಹಂಕಲ್ ಸರ್ಕಲ್‍ನಲ್ಲಿ ಮಹಾನಾಯಕ ಆಟೋ ನಿಲ್ದಾಣ ಹಾಗೂ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನೂರಾರು ಕನ್ನಡಾಭಿಮಾನಿಗಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೊನ್ನೇಶ್ ಗಣರಾಜ್ಯೋತ್ಸವ ಆಚರಣೆ ನಮ್ಮ ಹೆಮ್ಮೆ, ಈ ದಿನ ನಮ್ಮ ಸಂವಿಧಾನವನ್ನು ನಾವು ನಮಗೆ ಅರ್ಪಣೆ ಮಾಡಿಕೊಂಡ ದಿನ ಎಂದರು.
ಈ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ, ಸಹಬಾಳ್ವೆ, ಸಾಮಾಜಿಕ ಆರ್ಥಿಕ, ರಾಜಕೀಯ ಹಕ್ಕುಗಳನ್ನು ಸಮಾನವಾಗಿ ನೀಡಲಾಗಿದೆ. ಸಮಾಜದಲ್ಲಿದ್ದ ಅಸಮಾನತೆ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಪ್ರಾದೇಶಿಕ ತಾರತಮ್ಯ ಹೋಗಲಾಡಿಸಿ ಎಲ್ಲಾರಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪಗುಚ್ಛ ಅರ್ಪಿಸಿ ರಾಷ್ಟ್ರಗೀತೆ ಹಾಡಿ ಗೌರವ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಇಂದಾವಾರ ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ವಸಂತ್‍ಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ನಗರಸಭಾ ಸದಸ್ಯೆ ರೂಪ, ವಕೀಲ ಅನಿಲ್, ಕನ್ನಡಸೇನೆಯ ಜಯಪ್ರಕಾಶ್, ಸ್ಥಳೀಯರಾದ ಕೃಷ್ಣಮೂರ್ತಿ, ಸತೀಶ್, ನವೀನ್, ಕುಮಾರ್, ಆಟೋ ಸೋಮಣ್ಣ, ಧರ್ಮೇಶ್, ರವಿ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment