ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ಬಿಜೆಪಿಯ ಬಿ ಟೀಮ್‌ನಂತಿರುವ ಕಾಂಗ್ರೆಸ್: ಜೆಡಿಎಸ್ ಟೀಕೆ

ಚಿಕ್ಕಮಗಳೂರು: ಬಿಜೆಪಿಯ ಬಿ ಟೀಮ್‌ನಂತಿರುವ ಕಾಂಗ್ರೆಸ್: ಜೆಡಿಎಸ್ ಟೀಕೆ


ಚಿಕ್ಕಮಗಳೂರು: ಜಾತ್ಯಾತೀತ ಜನತಾದಳ ಮುಖವಾಡ ಕಳಚಿದೆ ಎಂದು ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರರು ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ವರ್ತಿಸಿದ ರೀತಿಯನ್ನು ಅವಲೋಕಿಸಬೇಕು ಎಂದು ಜೆಡಿಎಸ್ ನಗರ ಘಟಕ ಮಹಾಪ್ರಧಾನ ಕಾರ್ಯದರ್ಶಿ ಸಿ.ಕೆ.ಮೂರ್ತಿ ಹೇಳಿದ್ದಾರೆ.


ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಬೆಂಬಲ ಕೋರಿ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಬೆಂಬಲ ಕೋರಲಾಗಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ನಗರಸಭೆ ಚುನಾವಣೆಗೆ ಮುನ್ನ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಹೊಂದಾಣಿಕೆ ಬಗ್ಗೆ ಪತ್ರ ಬರೆದು ನಮ್ಮ ಪಕ್ಷಕ್ಕೆ 6 ಸ್ಥಾನಗಳನ್ನು ಬಿಟ್ಟುಕೊಡಲು ಕೇಳಿದ್ದೆವು, ಆದರೆ ನಮ್ಮ ಮನವಿಯನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತು ಎಂದಿದ್ದಾರೆ.


ನಗರಸಭಾ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ನಾವು ಕೇಳಿದ್ದ 6 ಸ್ಥಾನಗಳಲ್ಲಿ 3 ಸ್ಥಾನಗಳನ್ನು ನಾವು ಗೆಲುವು ಸಾಧಿಸಿದ್ದು ಇನ್ನುಳಿದ 3 ವಾರ್ಡ್‍ಗಳಲ್ಲಿ 2ನೇ ಸ್ಥಾನವನ್ನು ಜೆಡಿಎಸ್ ಪಡೆದುಕೊಂಡಿದೆ. ಬಿಜೆಪಿಯನ್ನು ನಗರಸಭೆ ಅಧಿಕಾರದಿಂದ ಹೊರಗಿಡುವ ಕಾಂಗ್ರೆಸ್ ಉದ್ದೇಶವಿದ್ದÀರೆ ನಮ್ಮೊಂದಿಗೆ ಮೈತ್ರಿ ಮಾಡಿ ನಗರಸಭಾ ಅಧಿಕಾರ ಚುಕ್ಕಾಣಿ ಹಿಡಿಯಬಹುದಿತ್ತು. ಆದರೆ ಇವೆಲ್ಲವನ್ನು ನೋಡಿದರೆ ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದಿದ್ದಾರೆ.


ಇತ್ತೀಚೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪ್ರಮುಖ ಮುಖಂಡರು ಬಿಜೆಪಿ ಜೊತೆ ಒಳಒಪ್ಪಂದದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಬಿಜೆಪಿ ನಗರಸಭೆ ಆಡಳಿತ ಹಿಡಿಯಲು ಬಹುಮತವಿದ್ದರೂ ಜೆಡಿಎಸ್ ಸದಸ್ಯರು ಬೆಂಬಲ ನೀಡಿರುವುದು ಕೇವಲ ವಾರ್ಡ್‍ಗಳ ಅಭಿವೃದ್ದಿ ದೃಷ್ಟಿಕೋನದಿಂದ ಹೊರತು ಯಾವುತ್ತೂ ಜೆಡಿಎಸ್ ನಗರಸಭೆಯಲ್ಲಿ ವಿರೋಧ ಪಕ್ಷವಾಗಿ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.


ಆಡಳಿತ ಪಕ್ಷ ಯಾವುದೇ ರೀತಿಯ ಜನವಿರೋಧಿ ನೀತಿಗಳನ್ನು ಅನುಸರಿಸಿದ್ದಲ್ಲಿ ಅದರ ವಿರುದ್ಧ ಜೆಡಿಎಸ್ ಪಕ್ಷ ಹೋರಾಟ ಮುಂದುವರೆಸಲಿದೆ ಎಂದು ಹೇಳಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post