ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ಸಚಿವ ಉಮೇಶ್ ಕತ್ತಿಗೆ ವೀರಶೈವ ಮಹಾಸಭಾ ಸನ್ಮಾನ

ಚಿಕ್ಕಮಗಳೂರು: ಸಚಿವ ಉಮೇಶ್ ಕತ್ತಿಗೆ ವೀರಶೈವ ಮಹಾಸಭಾ ಸನ್ಮಾನ


ಚಿಕ್ಕಮಗಳೂರು: ಜಿಲ್ಲೆಗೆ ಸುಮಾರು ಇಪ್ಪತ್ತು ವರ್ಷಗಳ ನಂತರ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಸಚಿವ ಉಮೇಶ್ ವಿ ಕತ್ತಿ ಅವರಿಗೆ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಜಿಲ್ಲೆಯು ಅತ್ಯಂತ ಪ್ರಾಕೃತಿಕವಾಗಿ ಮತ್ತು ಸುಸಂಕೃತವಾಗಿ ಇರುವ ಇಲ್ಲಿನ ನೆಲ, ಜಲ ಮತ್ತು ಅರಣ್ಯ ಪ್ರಕೃತಿ ಜಗತ್ತಿನಲ್ಲಿ ಪ್ರಸಿದ್ದ ಶ್ರೇಷ್ಟ ತಾಣವೆಂದು ಪ್ರಶಂಸೆ ವ್ಯಕ್ತಪಡಿಸಿದರು.


ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸರಕಾರ ಕಟ್ಟಿ ಬದ್ಧವಾಗಿದೆ, ಸಾರ್ವಜನಿಕರು ಕೂಡ ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಿ ಸಮನ್ವಯತೆ ಸಾಧಿಸಬೇಕೆಂದು ಹೇಳಿದರು. 


ಯಾರೂ ಕೂಡ ಹಸಿವಿನಿಂದ ಬಳದಂತೆ ಎಲ್ಲರಿಗೂ ಆಹಾರ ಧಾನ್ಯ ಸಿಗಬೇಕು ಎಂದ ಅವರು ಈ ನಿಟ್ಟಿನಲ್ಲಿ ಸರ್ಕಾರ ಆಹಾರ ಪೂರೈಕೆ ಯಲ್ಲಿ  ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಲೋಕೇಶ್, ಪ್ರಧಾನ ಕಾರ್ಯದರ್ಶಿ ಪಿ. ಚಂದ್ರಮೌಳಿ, ಯುವ ವೇದಿಕೆ ಮುಖಂಡ ಜಿ. ವೀರೇಶ್, ಕಾರ್ಯದರ್ಶಿ ಎಸ್.ಪಿ. ರೇಣುಕಾರಾಧ್ಯ, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಓಂಕಾರಸ್ವಾಮಿ, ನಗರ ವೀರಶೈವ ಸಮಾಜದ ಉಪಾಧ್ಯಕ್ಷ ಸಿ.ಆರ್ ಅಶೋಕ್ ಹಾಜರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم