ಬಂಟ್ವಾಳ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನೆಗೆ ಬಂಟ್ವಾಳ ತಹಶೀಲ್ದಾರರ ನಿಯೋಗ ಭೇಟಿ ನೀಡಿ ಸನ್ಮಾನಿಸಲಾಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಭೇಟಿ ನೀಡಿದ್ದು, ಮಹಾಲಿಂಗ ನಾಯ್ಕ ಅವರು ಕೊರೆದ ಸುರಂಗ ಮತ್ತು ತೋಟಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಹಾಲಿಂಗ ನಾಯ್ಕ ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಿದರು.
ದ.ಕ ಜಿಲ್ಲಾಡಳಿತ ಮತ್ತು ತಾಲೂಕು ವತಿಯಿಂದ ನಡೆಸಿದ ಗೌರವಾರ್ಪಣೆ ತುಂಬಾನೇ ಖುಷಿ ತಂದಿದ್ದು, ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದು ಮಹಾಲಿಂಗ ನಾಯ್ಕ ಹೇಳಿದರು.
ಈ ವೇಳೆ ಉಪತಹಶೀಲ್ದಾರ್ ದಿವಾಕರ ಮುಗುಳ್ಯ, ನವೀನ್ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕ ವಿನುತಾ, ಗ್ರಾಮ ಸಹಾಯಕ ಗಣೇಶ, ತಾಲೂಕ ಕಚೇರಿಯ ಸುಂದರ, ಶಿವಪ್ರಸಾದ್, ಮಹಮ್ಮದ್ ಆಸೀಪ್ ಭಾಗವಹಿಸಿದ್ದರು.
Post a Comment