ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚ ಕಲ್ಯಾಣ ಮತ್ತು ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಚಪ್ಪರ ಮುಹೂರ್ತ ನಡೆಯಿತು.
ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಎಂಬಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚ ಕಲ್ಯಾಣ ಮತ್ತು ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಚಪ್ಪರ ಮುಹೂರ್ತ ನಡೆಯಿತು.
ಫೆ. 3ರಿಂದ ಫೆ. 7ರವರೆಗೆ 5 ದಿನ ಪಂಚ ಕಲ್ಯಾಣ ಉತ್ಸವ ನಡೆಯಲಿದ್ದು, ಈಗಾಗಲೇ ಏಕಶಿಲಾ ಮಾನಸ್ತಂಭ ಪ್ರತಿಷ್ಠೆಗೊಂಡಿದೆ ಎಂದು ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ದೇವ ಕುಮಾರ್, ಪ್ರಮುಖರಾದ ಮಹಾವೀರ ಜೈನ್ ಅರಕಲಗೂಡು, ಡಾ. ಸುದೀಪ್ ಕುಮಾರ್ ಸಿದ್ದಕಟ್ಟೆ, ಹರ್ಷೇಂದ್ರ ಹೆಗ್ಡೆ ಅಂತರಗುತ್ತು, ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟುಗುತ್ತು, ಅಶೋಕ್ ಕುಮಾರ್ ಜೈನ್ ಪಂಜಿಕಲ್ಲು, ರಾಜೇಶ್ ಜೈನ್ ಪಡ್ರಾಯಿಗುತ್ತು, ರತ್ನವರ್ಮ ಇಂದ್ರ ಪಂಜಿಕಲ್ಲು, ಸಚಿನ್ ಕುಮಾರ್ ಪಡ್ರಾಯಿಗುತ್ತು, ಕೃಷ್ಣರಾಜ್ ಜೈನ್ ಪಂಜಿಕಲ್ಲು ಗುತ್ತು, ಡಾ.ಶ್ರೀಮಂಧರ್ ಜೈನ್ ಪಂಜಿಕಲ್ಲು, ಗೀತಾ ಜಿನಚಂದ್ರ ಬಂಟ್ವಾಳ, ಭರತ್ ಜೈನ್ ಬುಡೋಳಿ, ಜಿತೇಂದ್ರ ಜೈನ್ ಬುಡೋಳಿ, ಪದ್ಮಸ್ಮಿತ್ ಅಧಿಕಾರಿ ಹಿರ್ಣೆ, ಸುರೇಶ್ ಶೆಟ್ಟಿ ಕೊಯಿಲಾ, ವಿದ್ಯಾಕುಮಾರ್ ಪಂಜಿಕಲ್ಲು, ಲಲಿತಾ ವಸಂತ ಕುಮಾರ್ ಪಡ್ರಾಯಿಗುತ್ತು, ಚಂದ್ರಶೇಖರ್ ಪಂಜಿಕಲ್ಲು, ನವಿತಾ ಜೈನ್ ಪಂಜಿಕಲ್ಲು ಮತ್ತಿತರರು ಇದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق