ಮಂಗಳೂರು: ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ MRPL- ನ CSR ಯೋಜನೆ ಮತ್ತು MGNREG ಉದ್ಯೋಗ ಖಾತ್ರಿ ಯೋಜನೆಯಡಿ 18.5 ಲಕ್ಷದ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಬಡಗ ಎಡಪದವು ಪಂಚಾಯತ್ ನ 11 ಲಕ್ಷ ಮೊತ್ತದ ಸ್ವಚ್ಚ ಸಂಕೀರ್ಣ ಘಟಕ, ಪುಸ್ತಕಗೂಡು, ಡಿಜಿಟಲ್ ಗ್ರಂಥಾಲಯವನ್ನು ಶಾಸಕರಾದ ಡಾ| ಭರತ್ ಶೆಟ್ಟಿ ವೈ ಉದ್ಘಾಟಿಸಿದರು.
ಗ್ರಾಮ ಪಂಚಾಯತ್‌ಗೆ ಡಿಜಿಟಲ್ ಗ್ರಂಥಾಲಯವನ್ನು ಕೊಡುಗೆಯಾಗಿ ನೀಡಿದ ಪ್ರದೀಪ್ ಶೆಟ್ಟಿ ಬೆಳ್ಳೆಚ್ಚಾರ್, ದತ್ತಶ್ರೀ ಚಾರಿಟೇಬಲ್ ಟ್ರಸ್ಟ್ ಪರವಾಗಿ ಗೌರವಾಧ್ಯಕ್ಷ ತಾರನಾಥ ಸಫಳಿಗ, ಶಿವಪ್ರಸಾದ್ ಶೆಟ್ಟಿ, ವಸಂತ ಕಾಪಿಕಾಡ್ ಇವರನ್ನು ಗೌರವಿಸಿ ಧನ್ಯವಾದ ಸಮರ್ಪಿಸಿದರು.
ಜೊತೆಗೆ 28 ಕಟ್ಟಡ ಕಾರ್ಮಿಕ ಕಾಡ್೯ ಹಾಗೂ 54 ಇ-ಶ್ರಮ್ ಕಾಡ್೯ ಫಲಾನುಭವಿಗಳ ಕಾಡ್೯ ವಿತರಿಸಲಾಯಿತು.
ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಪಂಚಾಯತ್ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಯಶೋಧ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಪಂಚಾಯತ್ ಸದಸ್ಯರಾದ ವಸಂತ್, ಪ್ರದೀಪ್, ವರುಣ್ ಚಂದ್ರಹಾಸ್, ಶ್ರೀ ಲತಾ, ಸವಿತಾ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಣ್, CRP- ಪುಷ್ಪಾವತಿ, ಮುಖ್ಯೋಪಾಧ್ಯಾಯಿನಿ ಶಾಂಭವಿ, SDMC ಅಧ್ಯಕ್ಷರಾದ ಸುನೀತಾ,ಬಡಗ ಎಡಪದವು ಶಕ್ತಿಕೆಂದ್ರ ಪ್ರಮುಖ್ ತಾರನಾಥ ಸಫಳಿಗ, ಲಲಿತಾ ಶೆಟ್ಟಿಗಾರ್ ಬೂತ್ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಚಂದ್ರಹಾಸ್, ರಮೇಶ್ ಶೆಟ್ಟಿ, ಯಶವಂತ ಭಂಡಾರಿ ಇನ್ನಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment