ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅದರಂತೆ ಅವರ ಮಹತ್ವ ಜನರಿಗೂ ಗೊತ್ತಾಗಬೇಕು ಎಂಬ ದೃಷ್ಠಿಕೋನದಲ್ಲಿ ಪ್ರತೀ ವರ್ಷ ಡಿಸೆಂಬರ್ 3ರಂದು ಅಂಗವಿಕಲರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ 1992ರಲ್ಲಿ ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಅದೇನೇ ಆಗಲಿ ಇಂದು ಅಂಗವೈಕಲ್ಯತೆಯನ್ನೇ ಶಕ್ತಿಯನ್ನಾಗಿ ರೂಪಿಸಿಕೊಂಡು ಸಾಧನೆಗೈದ ಅದೆಷ್ಟೋ ಮಹನೀಯರು ನಮ್ಮ ಸುತ್ತಮುತ್ತಲಿದ್ದಾರೆ.
ಅಂಗವಿಕಲತೆ ಸಮಸ್ಯೆಗಳ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ವಿಕಲಾಂಗ ವ್ಯಕ್ತಿಗಳ ಘನತೆ ಗೌರವವನ್ನು ಕಾಪಾಡಿಕೊಳ್ಳವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ನಿಜವಾದ ಅಂಗವಿಕಲನೆಂದರೆ ಹೃದಯವಿದ್ದೂ ಹೃದಯ ವೈಶಾಲ್ಯತೆ ಇಲ್ಲದಿರುವವನು ಎನ್ನುತ್ತಾರೆ ಕೆಲವರು. ಪ್ರಸ್ತುತ ಸಮಾಜದಲ್ಲಿ , ಸಾಮಾಜಿಕ ಮಾಧ್ಯಮಗಳಲ್ಲೆಲ್ಲ ಅಂಗವಿಕಲರ ಸಾಧನೆ ನೋಡುವಾಗ ರೋಮಾಂಚನವಾಗುತ್ತದೆ. ಆಗ ಇಂತಹ ದಿನಕ್ಕೂ ಸಾರ್ಥಕತೆಯ ಭಾವ ಹುಟ್ಟಿಕೊಳ್ಳುತ್ತದೆ. ಸಮಸ್ಯೆಯನ್ನೇ ಅವಕಾಶವನ್ನಾಗಿ ಮಾಡಿಕೊಂಡು ಸಾಧನೆ ಮಾಡುವ ಯಾರೇ ಆದರೂ ಅವರು ನಮಗೆ ಮಾದರಿಯಲ್ಲವೇ?
Post a Comment