ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿಯಲ್ಲಿ ಡಾ ಬನ್ನಂಜೆ ಸಂಸ್ಮರಣೋತ್ಸವ, ಗೋವಿಂದಾಚಾರ್ಯರ ಪುತ್ಥಳಿ ಅನಾವರಣ

ಉಡುಪಿಯಲ್ಲಿ ಡಾ ಬನ್ನಂಜೆ ಸಂಸ್ಮರಣೋತ್ಸವ, ಗೋವಿಂದಾಚಾರ್ಯರ ಪುತ್ಥಳಿ ಅನಾವರಣ


ಉಡುಪಿ: ಬಹುಶ್ರುತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ ಈಶಾವಾಸ್ಯಮ್ ನಲ್ಲಿ ಬನ್ನಂಜೆಯವರ ಅಭಿಮಾನಿಗಳು ಶಿಷ್ಯರು ಮುಂಜಾನೆಯಿಂದ ಸಂಜೆಯವರೆಗೆ ಎಂಬ ಶೀರ್ಷಿಕೆಯಲ್ಲಿ ದಿನಪೂರ್ತಿ ಹಮ್ಮಿಕೊಂಡ ಕಾರ್ಯಕ್ರಮ ಶುಕ್ರವಾರ ಉದ್ಘಾಟನೆಗೊಂಡಿತು.

 

ಉಡುಪಿ ಶಾಸಕ ಹಾಗೂ ಆಚಾರ್ಯರ ಅಭಿಮಾನಿಯೂ ಆಗಿರುವ ಕೆ ರಘುಪತಿ ಭಟ್ಟರು ಉದ್ಘಾಟಿಸಿ, ರಾಜ್ಯ ಸರ್ಕಾರವು ಶ್ರೀಯುತ ಆಚಾರ್ಯರ ಶ್ರೇಷ್ಠವಾದ ಬಹುಮುಖಿ ವಾಙ್ಮಯ ಕೊಡುಗೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಗ್ರಂಥಾಲಯಕ್ಕೆ ಅವರ ಹೆಸರಿಡಲು ನಿರ್ಧರಿಸಿದೆ.‌ ಈ ಗ್ರಂಥಾಲಯದ ಎರಡನೇ ಮಹಡಿಯಲ್ಲಿ ಆಚಾರ್ಯರ ಕೃತಿಗಳ ಅಧ್ಯಯನ, ಪ್ರವಚನ ಉಪನ್ಯಾಸಗಳ ಶ್ರವಣಕ್ಕಾಗಿ ಹಾಗೂ ತತ್ತ್ವ ಶಾಸ್ತ್ರಗಳ ಅಧ್ಯಯನಕ್ಕೆ ಮುಡುಪಾಗಿಡಲಾಗುವುದು. ಸರ್ಕಾರದ ಈ ನಿರ್ಧಾರದಿಂದ ಆಚಾರ್ಯರಿಗೂ ಉತ್ತಮ ಗೌರವ ಮತ್ತು ಗ್ರಂಥಾಲಯದ ಶ್ರೇಷ್ಠತೆ ಹೆಚ್ಚಿದಂತಾಗಿದೆ ಎಂದರು.  


ನೂತನವಾಗಿ ನಿರ್ಮಿಸಲಾದ ಡಾ ಆಚಾರ್ಯರ ಸುಂದರ ಪ್ರತಿಮೆಯನ್ನು ಅವರ ಅಧ್ಯಾತ್ಮ ಶಿಷ್ಯ ರಷ್ಯಾ ದೇಶದ ನಾರಸಿಂಹ ನಿಕೋಲಾಯ್ ಲೋಕಾರ್ಪಣೆಗೊಳಿಸಿ, ಸಂಸ್ಕೃತ ಭಾಷೆಯಲ್ಲೇ ಭಾವುಕರಾಗಿ ಮಾತನಾಡಿ,  ಆಚಾರ್ಯರು ತಮ್ಮ ಮೇಲೆ ವಿಶೇಷ ಕಾರುಣ್ಯದಿಂದ ಅಧ್ಯಾತ್ಮದ ಬಗ್ಗೆ ತೋರಿದ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು. 


ಪ್ರತಿಮೆ ನಿರ್ಮಿಸಿಕೊಟ್ಟ ಕಲಾವಿದ ಜನಾರ್ದನ ಹಾವಂಜೆಯವರನ್ನು ಸಂಮಾನಿಸಲಾಯಿತು. ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಉದ್ಯಮಿ ಬಾಲಾಜಿ ರಾಘವೇಂದ್ರಾಚಾರ್ಯರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಹಿತೋಷ್ ಆಚಾರ್ಯ ಕಾರ್ಯಕ್ರಮ‌ ನಿರೂಪಿಸಿದರು.



1. ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರೋತ್ಸವದ ಅಂಗವಾಗಿ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ಮುಂಜಾನೆಯಿಂದ ಸಂಜೆಯ ತನಕ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ  ರಾಯಚೂರಿನ ಹುಸೇನ್ ಸಾಬ್ ಅವರು ಬನ್ನಂಜೆಯವರ ತತ್ತ್ವ ಪದಗಳ ಗಾಯನ ನಡೆಸಿಕೊಟ್ಟರು.‌ ವಿ|| ಶಶಿಕಿರಣ್ ಮಣಿಪಾಲ ಹಾರ್ಮೋನಿಯಂ ಮತ್ತು ವಿ|| ಮಾಧವಾಚಾರ್ಯ ತಬಲಾ ಸಹಕಾರ ನೀಡಿದರು.


2. ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ ಉಡುಪಿ ಅಂಬಲಪಾಡಿಯ ಈಶಾವಾಸ್ಯಂ ನಲ್ಲಿ ಮುಂಜಾನೆಯಿಂದ ಸಂಜೆಯ ತನಕ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕಲಾವಿದ ಬೆಂಗಳೂರಿನ ರಾಜ್ ಕಮಲ್ ಅವರು ವೇಣುವಾದನ ಕಚೇರಿ ನಡೆಸಿಕೊಟ್ಟರು.‌ ವಿ|| ಶ್ರೀನಿಧಿ ವಯಲಿನ್ ಮತ್ತು ವಿ|| ಅನಿರುದ್ಧ ಭಟ್ ಅವರು ಮೃದಂಗ ಸಹವಾದನ ನೀಡಿದರು.


3. ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ ಉಡುಪಿ ಅಂಬಲಪಾಡಿಯ ಈಶಾವಾಸ್ಯಂನಲ್ಲಿ ಮುಂಜಾನೆಯಿಂದ ಸಂಜೆಯ ತನಕ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷ್ಣರಾಜ ಆಚಾರ್ಯ ಕುತ್ಪಾಡಿ ಮತ್ತು ಬಳಗದವರಿಂದ ಭಕ್ತಿಗೀತೆಗಳ ವೃಂದಗಾಯನ ನಡೆಯಿತು.


4. ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ ಉಡುಪಿ ಅಂಬಲಪಾಡಿಯ ಈಶಾವಾಸ್ಯಂನಲ್ಲಿ ಮುಂಜಾನೆಯಿಂದ ಸಂಜೆಯ ತನಕ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಚಿನ್ಮಯ್ ಮತ್ತು ನಾಗೇಂದ್ರ ಅವರು ರಂಗವಲ್ಲಿಯಲ್ಲಿ ಬಿಡಿಸಿದ ಡಾ. ಬನ್ನಂಜೆಯವರ ಭಾವಚಿತ್ರ ಗಮನಸೆಳೆಯಿತು.


0 Comments

Post a Comment

Post a Comment (0)

Previous Post Next Post