ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂಚಾರ ನಿಯಮ ಉಲ್ಲಂಘನೆ: ಕಮಿಷನರೇಟ್ ವ್ಯಾಪ್ತಿಯಲ್ಲಿ 1,22,293 ಪ್ರಕರಣ ದಾಖಲು

ಸಂಚಾರ ನಿಯಮ ಉಲ್ಲಂಘನೆ: ಕಮಿಷನರೇಟ್ ವ್ಯಾಪ್ತಿಯಲ್ಲಿ 1,22,293 ಪ್ರಕರಣ ದಾಖಲು





ಮಂಗಳೂರು:
2021 ನೇ ಸಾಲಿನಲ್ಲಿ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆ 1,22,293 ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ 5,86,85,550 ರೂಪಾಯಿಗಳನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ ಎಂದು ಮಂಗಳೂರು ನಗರ ಪೋಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

2021 ನೇ ಸಾಲಿನಲ್ಲಿ ಸಿವಿಲ್ ವಿಭಾಗದಲ್ಲಿ 19 ಕಾನ್ಸೇಟಬಲ್ ಗಳಿಗೆ ಹೆಡ್ ಕಾನ್ಸ್ಟೇಬಲ್ ಆಗಿ 2 ಎಎಸ್ಐ ಗಳಿಗೆ ಪಿ.ಎಸ್.ಐ ಆಗಿ ಭಡ್ತಿ ನೀಡಲಾಗಿದೆ. ಇನ್ನು ಸಿಎಆರ್ ವಿಭಾಗದಲ್ಲಿ 133 ಕಾನ್ಸ್ಟೇಬಲ್ ಗಳಿಗೆ ಹೆಡ್ ಕಾನ್ಸ್ಟೇಬಲ್ ಆಗಿ 1 ಹೆಡ್ ಕಾನ್ಸ್ಟೇಬಲ್ ಗೆ ಎಆರ್ ಎಸ್ ಐ ಆಗಿ ಹಾಗೂ 1 ಎಸ್ ಆರ್ ಎಸ್ ಗೆ ಆರ್ ಎಸ್ ಐ ಆಗಿ ಭಡ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷದ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ವಿಧಿಸಲಾದ ಸಮಯದಲ್ಲಿ 5,86,85,550 ರೂಪಾಯಿಯನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ ಎಂಬ ನಿಖರವಾದ ಮಾಹಿತಿಯನ್ನು ಪೋಲೀಸ್ ಆಯುಕ್ತರಾದ ಶಶಿಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم