ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರ ಆತ್ಮಹತ್ಯೆ ಕೇಸ್ ಗೆ ಮತಾಂತರ ಯತ್ನವೇ ಕಾರಣ ಎಂಬುದು ಮಂಗಳೂರು ಪೋಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಮಂಗಳೂರಿನ ಮಾರ್ಗನ್ಸ್ ಗೇಟ್ ನಲ್ಲಿ ನಾಲ್ವರು ಆತ್ಮಹತ್ಯೆ ಕೇಸ್ ನಲ್ಲಿ ಮತಾಂತರ ಆರೋಪ ಪ್ರಕರಣ ದಾಖಲಾಗಿತ್ತು.
ಮತಾಂತರಗೊಳಿಸಲು ನೂರ್ ಜಹಾನ್ ಎಂಬ ಮುಸ್ಲಿಂ ಮಹಿಳೆ ಯತ್ನಿಸಿದ್ದಳು ಎನ್ನಲಾಗಿದೆ. ಪ್ರಕರಣದ ಬಗ್ಗೆ ಮಾತನಾಡಿದ ಮಂಗಳೂರು ಕಮಿಷನರ್ ಶಶಿಕುಮಾರ್ " ವಿಜಯಲಕ್ಷ್ಮಿ ಗಂಡ ಕುಡುಕನಾಗಿದ್ದು ನೂರ್ ಜಹಾನ್ ಅವಳಿಗೆ ಇನ್ನೊಂದು ಮದುವೆ ಮಾಡುವ ಭರವಸೆ ನೀಡಿದ್ದಳು. ಈ ಮಧ್ಯೆ ಆತ ತನ್ನ ಹೆಂಡತಿ ಹಾಗೂ ಮಕ್ಕಳು ಕಾಣೆಯಾಗಿದ್ದಾರೆ ಎಂದು ಕೂಡ ದೂರನ್ನು ನೀಡಿದ್ದ. ಪ್ರತಿಯಾಗಿ ವಿಜಯಲಕ್ಷ್ಮಿ ತನ್ನ ಗಂಡ ಕುಡಿದು ಬಂದು ಹಿಂಸೆ ನೀಡುತ್ತಿರುವುದಾಗಿ ಪ್ರತಿದೂರು ನೀಡಿದ್ದಳು.
ಡಿಸೆಂಬರ್ 7ರಂದು ನಾಗೇಶ್ ತನ್ನ ಪತ್ನಿ ಹಾಗೂ ಮಕ್ಕಳನ್ನು ಕೊಂದು ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು. ಇದರ ಮೊದಲು ಆತ ಘಟನಾವಳಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೂಡ ನೀಡಿದ್ದ " ಎಂದು ಹೇಳಿದ್ದಾರೆ.
Post a Comment