ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು: ಕೇಬಲ್ ಟಿವಿ ನೌಕರ ಸಾವು

ಕಾಸರಗೋಡು: ಕೇಬಲ್ ಟಿವಿ ನೌಕರ ಸಾವು

 


ಕಾಸರಗೋಡು: ಕೇಬಲ್ ಟಿವಿ ನೌಕರನೊಬ್ಬ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆಯೊಂದು ನಗರ ಹೊರ ವಲಯದ ನಾಯಮ್ಮಾರಮೂಲೆಯ ಎಂಬಲ್ಲಿ ನಡೆದಿದೆ.

ನಾಯಮ್ಮಾರಮೂಲೆ ನಿವಾಸಿ ಸುಲೈಮಾನ್ (45) ಮೃತಪಟ್ಟವರು. ಇವರು ಕೇಬಲ್ ಟಿವಿ ಟೆಕ್ನಿಷಿಯನ್ ಆಗಿದ್ದು, ಇವರು ಕೆಲಸ ಮುಗಿಸಿ ಎಂದಿನಂತೆ ಶನಿವಾರ ರಾತ್ರಿ ಮನೆಗೆ ಬಾರದ ಕಾರಣ ಮನೆ ಮಂದಿ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.

ಈ ನಡುವೆ ರವಿವಾರ ಬೆಳಗ್ಗೆ ಅವರು ಕೆಲಸ ಮಾಡುತ್ತಿದ್ದ ನಾಯಾಮ್ಮರಮೂಲೆಯ ಕೇಬಲ್ ಟಿವಿ ಕಚೇರಿ ಪರಿಸರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಲೆ ಹಾಗೂ ಕಾಲಿನಲ್ಲಿ ಗಾಯಗಳು ಕಂಡುಬಂದಿದೆ ಎಂದು ತಿಳಿದುಬಂದಿದೆ. ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم