ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೂಗಲ್ ನಲ್ಲಿ ದಾಖಲೆ ಮಾಡಿತು ಪುನೀತ್ ರಾಜ್ ಕುಮಾರ್ ಹೆಸರು....

ಗೂಗಲ್ ನಲ್ಲಿ ದಾಖಲೆ ಮಾಡಿತು ಪುನೀತ್ ರಾಜ್ ಕುಮಾರ್ ಹೆಸರು....

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ್ದರೂ ಕೂಡ ಜನಮಾನಸದಲ್ಲಿ ಅಜರಾಮರ. ಅವರು ಮಾಡಿರುವ ಸಾಧನೆಗಳ ಬಗ್ಗೆ ಮತ್ತು ಒಳ್ಳೆಯ ಕೆಲಸಗಳ ಬಗ್ಗೆ ಜನರು ಇಂದು ಕೂಡ ಮಾತಾಡುತ್ತಿದ್ದಾರೆ. ಅದರಲ್ಲೂ ಅವರು ದಿವಂಗತರಾದ ಮೇಲೆ ಹಲವಾರು ಉತ್ತಮ ಕಾರ್ಯಗಳು ಬೆಳಕಿಗೆ ಬಂದಿದೆ.

ಆದರೆ ಅಪ್ಪು ಮರಣದ ಬಳಿಕವೂ ಒಂದು ವಿಶೇಷ  ದಾಖಲೆ ಮಾಡಿದ್ದಾರೆ. ಅಪ್ಪು ಹೆಸರಲ್ಲಿ ಆದ ರೆಕಾರ್ಡ್ 2021 ರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.ಕೇವಲ 8 ಗಂಟೆಗಳಲ್ಲಿ 10 ಮಿಲಿಯನ್ ಗೂ ಅಧಿಕ ಮಂದಿ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಗೂಗಲ್ ನಲ್ಲಿ ಹುಡುಕಿದ್ದಾರೆ. 

ಸದ್ಯ ಪುನೀತ್ ರಾಜ್ ಕುಮಾರ್ ಮಾಡಬೇಕಿದ್ದ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ' ಜೇಮ್ಸ್' ಚಿತ್ರದಲ್ಲಿ ಅಪ್ಪು ಅವರೇ ಅಭಿನಯಿಸಿರುವುದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ, ಸದ್ಯದಲ್ಲೇ ರಿಲೀಸ್ ದಿನಾಂಕವನ್ನು ಚಿತ್ರತಂಡ ಪ್ರಕಟ ಮಾಡಲಿದೆ.


0 Comments

Post a Comment

Post a Comment (0)

Previous Post Next Post