ಬೆಂಗಳೂರು: ಮಾಟ ಮಂತ್ರಗಳ ಆಕರ್ಷಣೆಗೆ ಒಳಗಾಗಿ 17 ವರ್ಷದ ಅಪ್ರಾಪ್ತ ಬಾಲಕಿ ಮನೆಯಿಂದ ನಾಪತ್ತೆಯಾಗಿರುವ ಘಟನೆಯೊಂದು ಬೆಂಗಳೂರಿನಲ್ಲಿ ಅಕ್ಟೋಬರ್ 31 ರಂದು ನಡೆದಿದೆ.
17 ವರ್ಷದ ಬಾಲಕಿ ಅನುಷ್ಕ ವರ್ಮ ಕಳೆದ ಅಕ್ಟೋಬರ್ 31ರಂದು ಬೆಳಗ್ಗೆ 8.30ಕ್ಕೆ ಮನೆಬಿಟ್ಟು ಹೋದವಳು ಇನ್ನೂ ಹಿಂತಿರುಗಿಲ್ಲ.
ಪೊಲೀಸರು ತೀವ್ರ ಹುಡುಕಾಟ ನಡೆಸಿದರೂ ಕೂಡ ಆಕೆಯ ಸುಳಿವು ಸಿಕ್ಕಿಲ್ಲ.
ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕೂಡ ತಮ್ಮ ಮಗಳನ್ನು ಯಾರಾದರೂ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಾಲಕಿ ತಂದೆ ತಮ್ಮ ಮಗಳು ಮಾಟ-ಮಂತ್ರಿ ಅಭಿಚಾರದ ಪ್ರಭಾವಕ್ಕೆ ಒಳಗಾಗಿದ್ದಳು. ಆಕೆಗೆ ಕೆಲವು ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ, ಬೆಂಬಲವಿತ್ತು. ಮಗಳು ಕಾಣೆಯಾದ ದಿನದಿಂದ ನಮ್ಮ ಜೀವನ ನರಕವಾಗಿ ಬಿಟ್ಟಿದೆ ಎಂದರು.
إرسال تعليق