ಹುಬ್ಬಳ್ಳಿ: ಬಲವಂತವಾಗಿ ಮತಾಂತರ ಮಾಡುವುದರ ಕುರಿತು ಅನೇಕ ವಾದ ವಿವಾದಗಳು ನಡೆಯುತ್ತಿದೆ. ಇದರ ಬಗ್ಗೆ ಅಭಿಪ್ರಾಯ ಹಂಚಿಕೊಂಡ ವಿಧಾನಪರಿಷತ್ ಸದಸ್ಯೆ ಹಾಗೂ ನಟಿ ಆಗಿರುವ ತಾರಾ "ಬಲವಂತವಾದ ಮತಾಂತರಕ್ಕೆ ವೈಯಕ್ತಿಕವಾದ ವಿರೋಧವಿದೆ" ಎಂದು ಹೇಳಿದ್ದಾರೆ.
ಮತಾಂತರ ಮಾಡುವುದರ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತಾಡಿದ ಇವರು "ಯಾರದೋ ಬಲವಂತಕ್ಕಾಗಿ ಅಥವಾ ಆಸೆ ಆಮಿಷ ಒಡ್ಡಿ ಮತಾಂತರ ಮಾಡುವುದು ಕಾನೂನಿನ ವಿರೋಧವಾಗಿದೆ. ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮವಾಗಿರುತ್ತದೆ. ಹೀಗಾಗಿ ಯಾರೂ ಕೂಡ ಬಲವಂತದ ಮತಾಂತರಕ್ಕೆ ಒಳಗಾಗಬಾರದು ಎನ್ನುವುದು ಸರ್ಕಾರದ ಕಾಳಜಿಯಾಗಿದೆ" ಎಂದರು.
ಈ ವಿಚಾರದ ಬಗ್ಗೆ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ "ಮತಾಂತರ ನಿಷೇಧ ಕಾಯ್ದೆ ತರುವ ಸರ್ಕಾರದ ಚಿಂತನೆಯ ಹಿಂದೆ ದುರುದ್ದೇಶ ಅಡಗಿದೆ" ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
Post a Comment