ರಾಜಸ್ಥಾನ: ಸೊಸೆ ಹಲ್ಲೆ ಮಾಡಿದ ಪರಿಣಾಮ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ.
ರಾಮ್ಲಾಲ್ ಮೇಘ್ವಾಲ್ ಎಂಬ 60 ವರ್ಷದ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ, ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಂದಿ ಬಳಿಯ ಅಂತ್ರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ತಮ್ಮ ಮಗ ಮನೆಯಲ್ಲಿ ಇಲ್ಲದ ವೇಳೆ ಸೊಸೆಯೊಂದಿಗೆ ಜಗಳ ನಡೆದು, ಆ ವೇಳೆ, ಸೊಸೆ ಕೋಲಿನಲ್ಲಿ ತಲೆಗೆ ಹೊಡೆದಿದ್ದಾಳೆ.
ಈ ವೇಳೆ ರಾಮ್ಲಾಲ್‌ಗೆ ತೀವ್ರ ಗಾಯಗಳಾಗಿವೆ. ಮನೆಗೆ ಬಂದ ಮಗನಿಗೆ ಮೊಮ್ಮಕ್ಕಳು ನಡೆದ ಘಟನೆ ವಿವರಿಸಿದ್ದಾರೆ. ರಾಮ್‌ಲಾಲ್ ಪುತ್ರ ಸತ್ಯನಾರಾಯಣ್ ಮೇಘ್ವಾಲ್‌ನ ಮಡದಿ ಧನ್ನಿಬಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment