ಬಂಟ್ವಾಳ: ಭಾರತೀಯ ಸೇನಾ ಪಡೆಗಳ ಮುಖ್ಯ ಸೇನಾ ನಾಯಕ, ಸೇನಾ ಶಕ್ತಿಯ ಪ್ರಖರ ಜ್ಯೋತಿ, ಭಾರತಾಂಬೆಯ ಸೇವೆಗಾಗಿ ತನ್ನ ಬದುಕನ್ನೇ ಅರ್ಪಣೆ ಮಾಡಿದ ದಿವ್ಯಾತ್ಮ ಬಿಪಿನ್ ರಾವತ್. ಅವರಂಥವರು ಸಾವಿರಾರು ಬಿಪಿನ್ ರಾವತ್ ಮತ್ತೆ ಮತ್ತೆ ದೇಶದಲ್ಲಿ ಹುಟ್ಟಿ ಬರಲಿ ಎಂದೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಎಲ್ಲಾ ದೈವ ದೇವರುಗಳಲ್ಲಿ ಪ್ರಾರ್ಥನೆ ಮಾಡಿದರು.
ಅವರು ಇಂದು ಸಂಜೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರ ವತಿಯಿಂದ ಸಿದ್ದಕಟ್ಟೆಯಲ್ಲಿ ಜರಗಿದ ರಾಷ್ಟ್ರ ರಕ್ಸಕ, ಭಾರತೀಯ ಸಶಸ್ತ್ರ ಪಡೆಗಳ ಸಂಯುಕ್ತ ದಂಡನಾಯಕ ಬಿಪಿನ್ ರಾವತ್ ರವರಿಗೆ ಸಿದ್ದಕಟ್ಟೆ ನಾಗರಿಕರ ಪರವಾಗಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ಗೈಯುತ್ತಾ ನುಡಿ ನಮನ ಸಲ್ಲಿಸಿದರು.
ರಾಷ್ಟ್ರ ವಿರೋಧಿ ಪರಕೀಯರಿಗೆ ನೇರವಾಗಿ ಉತ್ತರ ನೀಡುವ ಮೂಲಕ, ರಾಷ್ಟ್ರ ರಕ್ಷಣೆಗಾಗಿ ದಿಟ್ಟ ಹೆಜ್ಜೆಯನ್ನು ಇಡುತ್ತಿರುವ ರಾಷ್ಟ್ರ ರಕ್ಷಕ ಬಿಪಿನ್ ರಾವತ್ ಪ್ರಧಾನಿ ನರೇಂದ್ರ ಮೋದಿಜಿ ಯವರಿಗೆ ಹೆಗಲಿಗೆ ಹೆಗಲು ಕೊಟ್ಟು ಬೆನ್ನೆಲುಬು ಆಗಿದ್ದರು, ಸರ್ಜಿಕಲ್ ಯುದ್ಧಕ್ಕೆ ಇವರೇ ಮುಖ್ಯ ಪ್ರೇರಣೆ ಆಗಿದ್ದುಕೊಂಡು ಭಾರತೀಯ ಕಣ್ಮಣಿ ಆಗಿದ್ದರು ಎಂದು ಹೇಳಿದರು.
ಜನರಲ್ ಬಿಪಿನ್ ರಾವತ್ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಯೋಧರಿಗೆಲ್ಲ ಸಿದ್ದಕಟ್ಟೆ ನಾಗರಿಕರು ಶ್ರದ್ಧಾಂಜಲಿ ಅರ್ಪಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರದ ವತಿಯಿಂದ ನಡೆದ ಶ್ರದ್ಧಾಂಜಲಿಯಲ್ಲಿ ಸ್ಥಳೀಯ ಸಂಘಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಸಂದೇಶ ಶೆಟ್ಟಿ ಪೋಡುಂಬ, ಸುನೀಲ್ ಶೆಟ್ಟಿಗಾರ್, ಉದಯ ತರಕಾರಿ, ಸಿದ್ದಕಟ್ಟೆ ಪದ್ಮ ಕ್ಲಿನಿಕ್ ವೈದಾರಾದ ಡಾ: ಪ್ರಭಾಚಂದ್ರ, ನಿವೃತ್ತ ಡಿ. ಫ್. ಓ ದಾಮೋದರ್ ಶೆಟ್ಟಿಗಾರ್ ಸೇರಿದಂತೆ ಸಿದ್ದಕಟ್ಟೆ ನಾಗರಿಕರು ಹಾಗೂ ಎಬಿವಿಪಿ ವತಿಯಿಂದ ಗುರುಪ್ರಸಾದ್, ದಿನೇಶ್, ಶಿವಕುಮಾರ್, ಕಿರಣ್, ಸೂರಜ್, ಹೇಮಂತ್, ಪ್ರಜ್ವಲ್ ಉಪಸ್ಥಿತರಿದ್ದರು.
Post a Comment