ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಟ ಶಿವರಾಜ್ ಕುಮಾರ್ 125 ನೇ ಚಿತ್ರಕ್ಕೆ ಭರ್ಜರಿ ಸಿದ್ಧತೆ

ನಟ ಶಿವರಾಜ್ ಕುಮಾರ್ 125 ನೇ ಚಿತ್ರಕ್ಕೆ ಭರ್ಜರಿ ಸಿದ್ಧತೆ



ಬೆಂಗಳೂರು: ಭಜರಂಗಿ 2 ಚಿತ್ರ ಬಿಡುಗಡೆಯಾಗುತ್ತಿದ್ದಂತೆ ನಿರ್ದೇಶಕ ಎ ಹರ್ಷ ಅವರ ಜೊತೆ ಇದೀಗ ನಟ ಶಿವರಾಜ್ ಕುಮಾರ್ ಮತ್ತೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇದು ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಆಗಿದ್ದು ಈ ಸಿನಿಮಾದ ಹೆಸರು "ವೇದ" ಆಗಿದೆ.

"ಇದರಲ್ಲಿ ಪೌರಾಣಿಕ, ಫ್ಯಾಂಟಸಿ ಕಥೆ ಇಲ್ಲ. ಒಂದು ಹಳ್ಳಿಯ ನೈಜವಾದ ಕಥೆಯನ್ನು ಹೇಳುತ್ತಿದ್ದೇವೆ. ಇದು ದಶಕಗಳ ಹಿಂದಿನ ಕಥೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೇನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದ ಕಥಾವಸ್ತು" ಎಂದಿದ್ದಾರೆ ನಿರ್ದೇಶಕ ಎ ಹರ್ಷ.

1960 ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು "ವೇದ" ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದ ಮುಹೂರ್ತ ನಾಲ್ಕು ದಿನಗಳ ಹಿಂದೆ ನಡೆದಿದ್ದು ಇದರ ಜತೆಯಲ್ಲಿ ಚಿತ್ರೀಕರಣವೂ ಪ್ರಾರಂಭವಾಗಿದೆ. ಶಿವಣ್ಣ ಇದರಲ್ಲಿ ವಯಸ್ಸಾದವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು 'ವೇದ' ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದರ ಮೊದಲ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.

0 Comments

Post a Comment

Post a Comment (0)

Previous Post Next Post