ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ವರ್ಷಾವಧಿ ಷಷ್ಠಿ ಉತ್ಸವ ಸಂಪನ್ನ

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ವರ್ಷಾವಧಿ ಷಷ್ಠಿ ಉತ್ಸವ ಸಂಪನ್ನ



ಕುಂಬಳೆ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಉತ್ಸವವು ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಯಿತು. ಅರವತ್ ಶ್ರೀ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು ಜರಗಿದವು. ಬಳಿಕ ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಸಾಂಗವಾಗಿ ನೆರವೇರಿದವು.


9.12.21 ಗುರುವಾರ ಬೆಳಗ್ಗೆ ಗಣಹೋಮ, ನಾವಕಾಭಿಷೇಕ, ತುಲಾಭಾರಸೇವೆ, ಮಧ್ಯಾಹ್ನ ಪೂಜೆ, ಶ್ರೀಭೂತಬಲಿ ಮತ್ತು  10.12.21 ಶುಕ್ರವಾರ- ಉಷಪೂಜೆ, ಶಿವೇಲಿ, ಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ, ವಿಷ್ಣುಮುರ್ತಿ ದೈವದ ಕೋಲ, ರಾತ್ರಿ ಶ್ರೀರಂಗಪೂಜೆ ಕಾರ್ಯಕ್ರಮಗಳು ಸಾಂಗವಾಗಿ ಜರಗಿದವು.


ಪ್ರಧಾನ ಅರ್ಚಕರಾದ ಅನಂತಪದ್ಮನಾಭ ಮಯ್ಯ ಅವರು ಪೂಜಾದಿ ವೈದಿಕ ಕಾರ್ಯಗಳನ್ನು ನೆರವೇರಿಸಿದರು.  ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.


(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post