ಬೆಂಗಳೂರು; ಅಕ್ಕಿ ದರ ಶೇಕಡ 10 ರಷ್ಟು ಹೆಚ್ಚಳವಾಗಿದ್ದು, ಪ್ರತಿ ಕೆಜಿ 4 ರೂ.ನಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ. ಸ್ಟೀಮ್ ರೈಸ್ ದರ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ. ಕೆಲವು ಬಗೆಯ ಅಕ್ಕಿಗಳು ಕೆಜಿಗೆ 4 ರೂಪಾಯಿಯಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ.
ಬಾಸ್ಮತಿ ಸ್ಟೀಮ್ ರೈಸ್ ಸಗಟು ದರ ಕೆಜಿಗೆ 10 ರೂ. ಜಾಸ್ತಿಯಾಗಿದ್ದು, ಚಿಲ್ಲರೆ ದರ 15 ರೂ.ವರೆಗೆ ಏರಿಕೆಯಾಗಿದೆ.
ಅಕ್ಕಿ ರಫ್ತು ಬೇಡಿಕೆ ಹೆಚ್ಚಾಗಿರುವುದು ಮತ್ತು ಅಕಾಲಿಕ ಮಳೆಯಿಂದ ಬೆಳೆಗೆ ಹಾನಿಯಾಗಿದೆ.
ಪಂಜಾಬ್, ಹರಿಯಾಣದಲ್ಲಿ ಕೊಯ್ಲು ಮಳೆಯ ಕಾರಣ ವಿಳಂಬವಾಗಿದೆ. ಹೀಗೆ ಅನೇಕ ಕಾರಣಗಳಿಂದಾಗಿ ಅಕ್ಕಿ ದರ ದುಬಾರಿಯಾಗಿದೆ ಎಂದು ಹೇಳಲಾಗಿದೆ.
Post a Comment