ಇತ್ತೀಚೆಗೆ ದೇಶದಲ್ಲಿ ಹವಾಮಾನವು ದಿನಕ್ಕೊಂದು ರೀತಿ ಬದಲಾಗುತ್ತಿದೆ. ಕೆಲವೊಂದು ಕಡೆ ಇದ್ದಕ್ಕಿದ್ದಂತೆ ಮಳೆಯೂ ಸಂಭವಿಸುವುದು ಸಾಮಾನ್ಯವಾಗಿದೆ. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಡಿಸೆಂಬರ್ 7ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಕೋಲಾರ, ಮಂಡ್ಯ, ಮೈಸೂರು ಇಂಥ ರಾಜ್ಯಗಳಲ್ಲಿ ಮಳೆಯಾಗಲಿದ್ದು ಇನ್ನು ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಕಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿಕೆ ನೀಡಿದೆ.
ದೇಶದ ಒಂದೊಂದು ರಾಜ್ಯಗಳಲ್ಲಿ ಮಳೆ, ಚಂಡಮಾರುತದಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಲೇ ಇದ್ದು ಈ ಬಗ್ಗೆ ಹವಾಮಾನ ಇಲಾಖೆಗಳು ವರದಿ ನೀಡುತ್ತಲೇ ಇದೆ. ಪ್ರಾಕೃತಿಕ ಅಸಮತೋಲನದಿಂದ ಸಂಭವಿಸುವ ಇಂತಹ ವಿಪತ್ತುಗಳ ಬಗಗೆ ಜನರು ಮುಂಜಾಗೃತೆಯಿಂದ ಇರುವುದು ಅಗತ್ಯವಾಗಿದೆ.
إرسال تعليق